ಮುಂಬೈ: ಮ್ಯಾಗಿಯಲ್ಲಿದ್ದ ಇಲಿ ಪಾಷಾಣ ಬೆರೆಸಿದ ಟೊಮೆಟೊವನ್ನು ತಿಂದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ.
ರೇಖಾ ನಿಶಾದ್(27) ಮೃತ ಮಹಿಳೆ. ಮುಂಬೈನ ಮಲಾಡ್ನ ಪಾಸ್ಕಲ್ ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿರುವ ಇಲಿಗಳನ್ನು ಕೊಲ್ಲಲು ರೇಖಾ ಟೊಮೆಟೊಗೆ ಇಲಿ ಪಾಷಾಣವನ್ನು ಬೆರೆಸಿದ್ದಳು. ಆದರೆ ಮ್ಯಾಗಿ ತಯಾರಿಸುತ್ತಿದ್ದಾಗ ಟಿವಿ ನೋಡುತ್ತಾ ಆಕಸ್ಮಿಕವಾಗಿ ಇಲಿ ಪಾಷಾಣ ಬೆರೆಸಿದ್ದ ಟೊಮೆಟೊವನ್ನು ಹಾಕಿದ್ದಾಳೆ. ಇದನ್ನೂ ಓದಿ: ವರದಕ್ಷಿಣೆ ಕೊಡಲಿಲ್ಲವೆಂದು ಸ್ನೇಹಿತರ ಜೊತೆ ಸೇರಿ ಪತ್ನಿಯನ್ನೆ ಅತ್ಯಾಚಾರ ಮಾಡಿದ
Advertisement
Advertisement
ನಂತರ ಮ್ಯಾಗಿಯನ್ನು ತಿಂದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯದಿಂದ ಬಳಲು ಪ್ರಾರಂಭಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಹಾಗೂ ಸೋದರ ಮಾವ ಅವಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು