ಲಕ್ನೋ: ಒಂದೆಡೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನ ಕಳೆದ ಖುಷಿಯಾದ್ರೆ, ಇನ್ನೊಂದೆಡೆ ರಾಜ್ಯದಲ್ಲಿ ಅತ್ಯಾಚಾರದಂತಹ ಪ್ರಕರಣಗಳಿಗೆ ಕೊನೆಯೇ ಇಲ್ಲದಂತಾಗಿದೆ.
ಹೌದು. ಉತ್ರಪ್ರದೇಶದ ಸಾಂಭಾಲ್ ಜಿಲ್ಲೆಯಲ್ಲಿ ತಮ್ಮ ಮಗ ಹಾಗೂ ಮಗಳ ಎದುರು ನಾಲ್ಕು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಇಂದು ವರದಿಯಾಗಿದೆ.
Advertisement
ನಡೆದಿದ್ದೇನು?: 40 ವರ್ಷದ ಮಹಿಳೆಯೊಬ್ಬರು ಜೂನ್ 16ರಂದು ಪಾಣಿಪತ್ ಕಡೆ ಹೋಗಲೆಂದು ತನ್ನ 11 ವರ್ಷದ ಮಗಳು ಹಾಗೂ 13 ವರ್ಷದ ಮಗನ ಜೊತೆ ಜಿಲ್ಲೆಯ ಬರೇಲಿ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಮೂವರು ಮಹಿಳೆಯ ಹತ್ತಿರ ಬಂದು ಮಾತನಾಡುತ್ತಾ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಇಬ್ಬರು ಮಕ್ಕಳ ಸಮೇತ ಅಪಹರಿಸಿದ್ದಾರೆ. ಬಳಿಕ ಗ್ರಾಮದ ಗಿನ್ನೌ ಎಂಬ ಪ್ರದೇಶಕ್ಕೆ ಕೆರದುಕೊಂಡು ಸತತ ನಾಲ್ಕು ದಿನಗಳ ಕಾಲ ಮಕ್ಕಳ ಎದುರೇ ಅತ್ಯಾಚಾರವೆಸಗಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾರೆ ಎಂಬುವುದಾಗಿ ಅಲ್ಲಿನ ಎಸ್‍ಪಿ ಪಂಕಜ್ ಪಾಂಡೇ ತಿಳಿಸಿದ್ದಾರೆ.
Advertisement
ಸದ್ಯ ಮಹಿಳೆ ತನ್ನ ಮಗನೊಂದಿಗೆ ಕಾಮುಕರಿಂದ ತಪ್ಪಿಸಿಕೊಂಡು ಬಂದಿದ್ದು, ಪೊಲಿಸರಿಗೆ ದೂರು ನಿಡಿದ್ದಾರೆ. ಆದ್ರೆ ಮಗಳು ಇನ್ನೂ ಅದೇ ಗ್ರಾಮದಲ್ಲಿದ್ದು, ಆಕೆಯನ್ನು ರಕ್ಷಿಸುವಂತೆ ಮಹಿಳೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಘಟನೆ ಸಂಬಂಧ ಇಬ್ಬರು ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಚಂದೌಸಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಸೋಮವಾರ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಅಂತಾ ಎಸ್ ಪಿ ರವಿಶಂಕರ್ ಚಾಬಿ ತಿಳಿಸಿದ್ದಾರೆ.