ಮಡಿಕೇರಿ: ಶಾಲೆ ಮುಖ್ಯಸ್ಥೆಯೊಬ್ಬರು ತನ್ನ ಮೇಲೆ ಮಹಾಕಾಳಿ ಬಂದಿದೆ ಎಂದು ಹೇಳಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಮಂಗಳವಾರ ನಡೆದಿದೆ.
ಕುಶಾಲನಗರ ಪಟ್ಟಣ ಪಂಚಾಯಿತಿ ಎದುರು ಮಹಿಳೆ ವಿಚಿತ್ರವಾಗಿ ವರ್ತಿಸಿದ್ದಾರೆ. ಸ್ಥಳೀಯ ಬ್ರಿಲಿಯಂಟ್ ಬ್ಲೂಮ್ ಶಾಲಾ ಮುಖ್ಯಸ್ಥೆ ಮುಬೀನ್ ತಾಜ್, ಮಹಾಕಾಳಿ ತನ್ನ ದೇಹ ಪ್ರವೇಶಿಸಿದೆ ಎಂದು ಕೈಯಲ್ಲಿ ತ್ರಿಶೂಲ ಹಿಡಿದಿದ್ರು. ಶಾಲಾ ಕೊಠಡಿಯೊಂದರ ಭೂಮಿಯ ಅಡಿಯಲ್ಲಿ ಹುದುಗಿರುವ ವಿಗ್ರಹವನ್ನು ಮೇಲೆತ್ತಿ ದೇವಾಲಯ ಸ್ಥಾಪನೆಗೆ ಉಂಟಾಗಿರುವ ಅಡೆತಡೆಗಳಿಗೆ ಪಟ್ಟಣ ಪಂಚಾಯಿತಿ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
Advertisement
ಸಾರ್ವಜನಿಕರು ಇದನ್ನು ಕಂಡು ಕೆಲಕಾಲ ಪುಕ್ಕಟ್ಟೆ ಮನರಂಜನೆ ಪಡೆದರು. ಅಧಿಕಾರಿಗಳನ್ನು ಹೊರಕ್ಕೆ ಬರುವಂತೆ ಕಾಳಿ ಅವತಾರಿ ಆಜ್ಞಾಪಿಸುತ್ತಿದ್ದುದು ಕೆಲವರಲ್ಲಿ ನಗು ತರಿಸಿತು.
Advertisement
ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷಕ ನಂದಕುಮಾರ್ ಹಾಗೂ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಮೇಲಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಮುಬೀನ್ ತಾಜ್,`ನನಗೆ ತಕ್ಷಣ ದೇವರ ವಿಗ್ರಹ ಮೇಲೆತ್ತಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.
Advertisement
ಮುಖ್ಯಾಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಹಿಳಾ ಪೊಲೀಸರು ಮುಬೀನ್ ತಾಜ್‍ರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
Advertisement
https://www.youtube.com/watch?v=nU_NNsG8M0E&feature=youtu.be