ಲಂಡನ್: ಹಾಡಹಗಲೇ ಜೋಡಿಯೊಂದು ಪಾರ್ಕಿನಲ್ಲಿ ಸೆಕ್ಸ್ ಮಾಡಿದ್ದು, ಇದೀಗ ಪೊಲೀಸರು ಆ ವಿಡಿಯೋ ವೈರಲ್ ಆದ ಬಳಿಕ 30 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.
ಈ ವಿಲಕ್ಷಣ ಘಟನೆ ಮೇ 11 ರಂದು ನಡೆದಿದ್ದು, ಆಕ್ಸ್ಫಡ್ರ್ಶೈರ್ ನಲ್ಲಿರುವ ಬಿಸ್ಸೆಟರ್ ಪಿಂಗಲ್ ಪ್ರದೇಶದಲ್ಲಿ ನಡೆದಿದೆ. ಜೋಡಿಯ ಸೆಕ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ವಿಡಿಯೋದಲ್ಲಿ ಜೋಡಿಯೊಂದು ಪಾರ್ಕಿನಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಮಗುವನ್ನು ಕರೆದುಕೊಂಡು ಹೋಗುವ ಒಬ್ಬ ವ್ಯಕ್ತಿ ಮತ್ತು ಇನ್ನೂ ಇತರೆ ವ್ಯಕ್ತಿಗಳು ಪಾರ್ಕಿನಲ್ಲಿ ಇರೋದನ್ನು ವಿಡಿಯೋದಲ್ಲಿ ಕಾಣಬಹುದು. ಅವರೆಲ್ಲರೂ ನೋಡುತ್ತಿದ್ದರು ಜೋಡಿಯೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿತ್ತು.
ಥೇಮ್ಸ್ ವ್ಯಾಲಿ ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸಿದ್ದು, ಈ ಘಟನೆ ಬಗ್ಗೆ ಸಾಕ್ಷಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅದು ಹಗಲಿನಲ್ಲಿಯೇ ಜೋಡಿಯೊಂದು ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಅಪರಾಧಕ್ಕೆ ಇನ್ನೂ ಹೆಚ್ಚಿನ ಸಾಕ್ಷಿಗಳು ಬೇಕಾಗಿದೆ. ಸದ್ಯಕ್ಕೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಡಿಟೆಕ್ಟಿವ್ ಇನ್ಸ್ ಪೆಕ್ಟರ್ ಜಾನ್ ಕ್ಯಾಪ್ಪ್ಸ್ ಹೇಳಿದ್ದಾರೆ.
ಈ ರೀತಿಯ ಘಟನೆಗಳು ಇಲ್ಲಿ ಸಾಮಾನ್ಯವಾಗಿದ್ದರೂ, ಇಂತಹ ಘಟನೆಗಳು ನಡೆದಾಗ ವರದಿ ಮಾಡಲು ಸಿಬ್ಬಂದಿ ನೇಮಕ ಅವಶ್ಯಕ ಎಂದು ಪೊಲೀಸರು ತಿಳಿಸಿದ್ದಾರೆ.