– 12ನೇ ವಯಸ್ಸಿನಲ್ಲೇ ಆಕೆಯ ಸಹೋದರನೂ ಹೃದಯಾಘಾತದಿಂದಲೇ ಸಾವು
ಭೋಪಾಲ್: ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಹೃದಯಸ್ತಂಭನದಿಂದ (Cardiac Arrest) 23ರ ಯುವತಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ವಿದಿಶಾ ಜಿಲ್ಲೆಯ ರೆಸಾರ್ಟ್‌ನಲ್ಲಿ ನಡೆದಿದೆ.
ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ ಜೈನ್ ಎಂದು ಗುರುತಿಸಲಾಗಿದ್ದು, ಆಕೆಯ ಸೋದರ ಸಂಬಂಧಿ ಮದುವೆಯಲ್ಲಿ (Wedding) ಪಾಲ್ಗೊಂಡಿದ್ದರು. 200ಕ್ಕೂ ಹೆಚ್ಚು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಪರಿಣಿತಾ ವೇದಿಕೆಯಲ್ಲಿ ಬಾಲಿವುಡ್ ಗೀತೆಯೊಂದಕ್ಕೆ ನೃತ್ಯ ಮಾಡುತ್ತಿದ್ದಾಗಲೇ ಹೃದಯ ಸ್ತಂಬನದಿಂದ ಸಾವನ್ನಪ್ಪಿದ್ದಾರೆ. ಆಕೆ ಕುಸಿದು ಬಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಈ ವೇಳೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೈದ್ಯರು ಆಕೆಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನೀಡಲು ಪ್ರಯತ್ನಿಸಿದ್ರು, ಆದ್ರೆ ಪ್ರಯೋಜನವಾಗಲಿಲ್ಲ. ತಕ್ಷಣ ಅಲ್ಲಿಂದ ಖಾಸಗಿ ಅಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ರು. ಇದನ್ನೂ ಓದಿ: ಇಂದಿನಿಂದ ಟಿ.ನರಸೀಪುರದಲ್ಲಿ ದಕ್ಷಿಣ ಭಾರತದ ಏಕೈಕ ಕುಂಭಮೇಳ
ಎಂಬಿಎ ಪದವೀಧರರಾಗಿದ್ದ ಪರಿಣಿತಾ ತಮ್ಮ ಪೋಷಕರೊಂದಿಗೆ ಇಂದೋರ್‌ನ ದಕ್ಷಿಣ ತುಕೋಗಂಜ್‌ನಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಆಕೆಯ ಸಹೋದರನೊಬ್ಬ 12ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ. ಇದನ್ನೂ ಓದಿ: Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ