ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ನಿರಂತರ 2 ಗಂಟೆ ಗ್ಯಾಂಗ್ ರೇಪ್!

Public TV
2 Min Read
GANGRAPE 1

ಚಂಡೀಗಢ: ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ಬಳಿಕ ಚಲಿಸುತ್ತಿದ್ದ ಕಾರಿನಲ್ಲಿಯೇ ನಿರಂತರ 2 ಗಂಟೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಆರೋಪಿಯ ಬಂಧನವಾಗಿಲ್ಲ.

RAPE

ನಡೆದಿದ್ದೇನು?:
ಮಹಿಳೆ ಶನಿವಾರ ಸಂಜೆ 7 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ತನ್ನ ಕಚೇರಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎಸ್‍ಯುವಿ ವಾಹನದಲ್ಲಿ ಬಂದ ಕಾಮುಕರು, ಈಕೆಯ ಮುಂದೆ ವಾಹನ ನಿಲ್ಲಿಸಿ, ಆಕೆಯನ್ನು ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ವಾಹನ ಚಲಿಸುತ್ತಿದ್ದಂತೆಯೇ ಕಾಮುಕರು ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಹಿಳೆ ಇದ್ದ ಸ್ಥಳದಿಂದ ಸುಮಾರು 20 ಕಿಮೀ ದೂರದಲ್ಲಿರೋ ಸಿಕ್ರಿ ಗ್ರಾಮದ ಪೆಟ್ರೋಲ್ ಪಂಪ್ ಬಳಿಕ ಆಕೆಯನ್ನು ಎಸೆದು ಹೋಗಿದ್ದಾರೆ.

ಕ್ರೈಂ ಬ್ರ್ಯಾಂಚ್ ಅಧಿಕಾರಿ ಹೇಳಿದ್ದೇನು?
ಮಹಿಳೆಯ ದೇಹದಲ್ಲಿ ಗಾಯಗಳಾಗಿವೆ. ಇದೊಂದು ಗ್ಯಾಂಗ್ ರೇಪ್ ಪ್ರಕರಣವಾಗಿದ್ದು, ಈ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

car rape

ಇದೇ ದಿನ ಈ ಘಟನೆ ನಡೆದ ಸ್ಥಳದಿಂದ 175 ಕಿಮೀ ದೂರದಲ್ಲಿ ವಾರದ ಹಿಂದೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಶ್ವಾಸಕೋಶ ಮತ್ತು ಕಿಡ್ನಿ ಛಿದ್ರವಾಗಿದ್ದ ರೀತಿಯಲ್ಲಿ ಶವ ಸಿಕ್ಕಿತ್ತು. ಈ ಕೃತ್ಯ 2 ಅಥವಾ ಮೂರು ಮಂದಿಯಿಂದ ನಡೆದಿದೆ ಎಂದು ಶಂಕಿಸಲಾಗಿದ್ದು, ಬಾಲಕಿಯ ಗುಪ್ತಾಂಗ ಸೇರಿದಂತೆ ದೇಹದ ಇತರ ಅಂಗಗಳು ಹಾನಿಗೊಳಗಾಗಿವೆ ಅಂತ ರೊಹ್ಟಕ್ ಪಿಜಿಐ ಡಾ. ಎಸ್ ಕೆ ದತ್ತಾರ್ವಾಲ್ ಹೇಳಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳನ್ನು ಗುರುತಿಸಿ ಶೀಘ್ರವೇ ಬಂಧಿಸುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಭರವಸೆ ನೀಡಿದ್ದಾರೆ.

ಭಾನುವಾರವೂ ಈ ರೀತಿಯ ಘಟನೆ ನಡೆದಿದ್ದು, 11 ವರ್ಷದ ಬಾಲಕಿಯನ್ನು ಶನಿವಾರ ಸಂಜೆ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆಗೈದು ಬಳಿಕ ಆಕೆಯ ಮನೆ ಪಕ್ಕದಲ್ಲಿರೋ ಚರಂಡಿಗೆ ಎಸದೆಹೋಗಿದ್ದಾರೆ. ಈ ಘಟನೆ ಪಾನಿಪತ್ ನ ಗ್ರಾಮದಲ್ಲಿ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

gangrape

rape

RAPE 4

rape

noida gang rape

Share This Article
Leave a Comment

Leave a Reply

Your email address will not be published. Required fields are marked *