ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಮಧ್ಯೆ ಬೆಳಗ್ಗೆನೇ ಯಾರೋ ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹೌದು. ಸತತವಾಗಿ ಚಿತ್ರೀಕರಣದಲ್ಲಿ ತೊಡಗಿರುವ ಕಾರಣದಿಂದಾಗಿ ರಶ್ಮಿಕಾ ಅವರು ಮೊಣಕಾಲು ನೋವಿನ (Knee Pain) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಹೈದರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಗೆ (Hyderabad Hospital) ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ನಟಿ ಇದೀಗ ಟ್ವೀಟ್ (Tweet) ಒಂದನ್ನು ಮಾಡಿದ್ದಾರೆ.
Woke up this morning with a lot of hiccups.
I wonder who’s missing me…????
— Rashmika Mandanna (@iamRashmika) September 25, 2022
ಇಂದು ಬೆಳಗ್ಗೆ ಎದ್ದ ಕೂಡಲೇ ನನಗೆ ತುಂಬಾ ಬಿಕ್ಕಳಿಕೆ ಬಂದಿದೆ. ನನಗ ಅಚ್ಚರಿಯಾಗಿದ್ದು, ಯಾರೋ ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಾರಾಗಿರಬಹುದು ಎಂದು ಯೋಚನೆ ಮಾಡುವ ಸಿಂಬಲ್ ಹಾಕಿ ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ
ಆಸ್ಪತ್ರೆಗೆ ದಾಖಲಾದ ನಟಿಗೆ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಅವರು ರಶ್ಮಿಕಾಗೆ ಚಿಕಿತ್ಸೆ ನೀಡಿದ್ದು, ತಮಾಷೆಯಾಗಿ `ಸಾಮಿ ಸಾಮಿ ಅಂತ ಮೊಣಕಾಲಿಗೆ ಭಾರ ಹಾಕಿ ಡಾನ್ಸ್ ಮಾಡಿದ್ದೀರಿ. ಅದಕ್ಕಾಗಿ ಈ ನೋವು ಬಂದಿದೆ’ ಎಂದು ಬರೆದುಕೊಂಡಿದ್ದರು.
ಮೊಣಕಾಲಿನ ನೋವು ಅತಿಯಾದ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ರಶ್ಮಿಕಾ ಬಂದಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಸರಿ ಹೋಗುತ್ತಾರೆ. ಎಂದಿನಂತೆ ಮತ್ತೆ ಸಿನಿಮಾಗಳ ಶೂಟಿಂಗ್ (Film Shooting) ನಲ್ಲೂ ಅವರು ಭಾಗಿಯಾಗಲಿದ್ದಾರೆ. ಹೆಚ್ಚು ಮೊಣಕಾಲಿಗೆ ಕೆಲಸ ಕೊಟ್ಟಿರುವ ಕಾರಣದಿಂದಾಗಿಯೇ ಈ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.