ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಇಂಡಸ್ಟ್ರಿಯಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. 5 ದಿನಗಳ ಕಾಲ ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಸಾಧನೆ..ಸಂಭ್ರಮ..ಚಿತ್ರೋತ್ಸವ ಕಾರ್ಯಕ್ರಮ ನಡೆದಿದೆ. ಅಕ್ಟೋಬರ್ 23 ರಿಂದ 27ರವರೆಗೆ ರಾಜೇಂದ್ರಸಿಂಗ್ ಬಾಬು ಅವರ ಸಿನಿಮಾಗಳ ಪ್ರದರ್ಶನ, ಸಂವಾದ ಸಂಕೀರ್ಣ ಕಾರ್ಯಕ್ರಮಕ್ಕೆ ಅಕೋಬರ್ 27ರಂದು ಎಳೆಯಲಾಗಿದೆ.
ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ರಾಜೇಂದ್ರ ಸಿಂಗ್ ಬಾಬು ಅವರ ಆಪ್ತರು ಹಾಗೂ ಕುಟುಂಬಸ್ಥರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಸುಹಾಸಿನಿ ರಾಜೇಂದ್ರ ಸಿಂಗ್ ಬಾಬು ಅವರ ಒಟ್ಟಿಗಿನ ಒಡನಾಟ, ಸಿನಿಮಾ ಶೂಟಿಂಗ್ ದಿನಗಳನ್ನ ನೆನೆದಿದ್ದಾರೆ. ಜೊತೆಗೆ ಬಾಬು ಅವರು ಅವಕಾಶ ಕೊಡದೇ ಇದ್ದಿದ್ದರೇ ಸುಹಾಸಿನಿ ಏನೂ ಅಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: SVR @ 50 – ಕನ್ನಡ ಚಿತ್ರರಂಗದ ಗಣ್ಯರು ಭಾಗಿ
ಸರಳ, ಸಹಜ ಮಾತುಗಳಿಂದ ತಮ್ಮ ಗುರುಗಳಾದ ರಾಜೇಂದ್ರ ಸಿಂಗ್ ಅವರನ್ನ ಹಾಡಿ ಹೊಗಳಿದ್ದಾರೆ. ಬಂಧನ, ಮುತ್ತಿನ ಹಾರ ಸಿನಿಮಾಗಳ ಮೂಲಕ ಸಿನಿಮಾ ಮಂದಿಯ ಹೃದಯದಲ್ಲಿ ಈಗಲೂ ಹಚ್ಚೆ ಒತ್ತಿದ್ದಾರೆ ಸುಹಾಸಿನಿ. ಎಸ್‌ವಿಆರ್ @50 ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದ ಅವರು ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದು ಖುಷಿ ಕೊಟ್ಟಿದೆ. ನೂರೊಂದು ನೆನಪು ಎದೆಯಾಳದಿಂದ ಹಾಡು ವಂಡರ್‌ಫುಲ್ ಎಂದಿದ್ದಾರೆ. ಇನ್ನು ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಲ್ಲಬೇಕಾದ ಗೌರ ಸಲ್ಲಿದೆ ಎಂದಿದ್ದಾರೆ.
 


 
		
 
		 
		 
		 
		