ಚಿಕ್ಕೋಡಿ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ಲರೂ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ನಾ ಖಾವುಂಗಾ ನಾ ಖಿಲಾವುಂಗಾ ಎಂದು ಹೇಳಿದ್ದರು. ಚೌಕಿದಾರ ಏನೂ ಮಾಡುತ್ತಿದ್ದಾರೆ. ಪ್ರಧಾನಿ ಯಾಕೆ ಮೌನರಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ. ಮೋದಿ ಅವರಿಗೆ ಭ್ರಷ್ಟಾಚಾರದಲ್ಲಿ ಸಮ್ಮತಿ ಇದ್ದ ಹಾಗೇ ಆಗಿದೆ. ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಇದೆ ಎಂದರು. ಇದನ್ನೂ ಓದಿ: ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ
ಕಮಿಷನ್ ಕಿರುಕುಳಕ್ಕೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹೋರಾಟ ಬಳಿಕ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಈಶ್ವರಪ್ಪ ಅವರನ್ನು ಬಂಧಿಸಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು. ಗುತ್ತಿಗೆದಾರರಿಗೆ ಬೆದರಿಕೆ ಇದೆ. ಕೆಂಪಣ್ಣ ಹೇಳಿರುವ ಎಲ್ಲ ಸಚಿವರ ಮೇಲೆ ನ್ಯಾಯಾಂಗ ತನಿಖೆ ಆಗಬೇಕು. ಈಶ್ವರಪ್ಪ ಪ್ರಕರಣ ಹೈಕೋರ್ಟ್ ಜಡ್ಜ್ ಅವರಿಂದ ತನಿಖೆಯಾಗಬೇಕು. ಪ್ರತಿ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ರಾಜ್ಯದಲ್ಲಿರುವ 40% ಸರ್ಕಾರದ ವಿರುದ್ಧ ಜನಾಂದೋಲನದ ಮೂಲಕ ಜಾಗೃತಿ ಮೂಡಿಸಲಾಗುವುದು. ತಮ್ಮ ವೈಫಲ್ಯದ ಕುರಿತು ಜನರ ಗಮನ ಬೇರೆಡೆ ಹರಿಸಲು ಕೋಮು ಸೌಹಾರ್ದ ಕೆಡಿಸಲಾಗುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಮೋದಿ ಹೇಳಿರುವ ಅಚ್ಛೆ ದಿನ ಯಾರಿಗೂ ಬಂದಿಲ್ಲ ಎಂದು ವ್ಯಂಗ್ಯವಾಡಿದರು.
ಗಲಭೆ ಯಾರೇ ಮಾಡಲಿ ಅವರ ಮೇಲೆ ನಿದ್ರ್ಯಾಕ್ಷಣ್ಯ ಕ್ರಮ ಆಗಬೇಕು. ಈ ರೀತಿ ಕಾನೂನು ಕೈಗೆ ತಗೆದುಕೊಳ್ಳಲು ಯಾರಿಗೂ ಹಕ್ಕು ಇಲ್ಲ. ನಾನು ಇದನ್ನು ಖಂಡಿಸುತ್ತೇನೆ. ಕಾನೂನು ಕೈಯಲ್ಲಿ ತೆಗೆದುಕೊಂಡಿದ್ದು ದುರಾದೃಷ್ಟಕರ. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಆದರೆ ನಿರಪರಾಧಿಗಳ ವಿರುದ್ಧ ಯಾವುದೇ ಕ್ರಮ ಆಗಬಾರದು ಎಂದು ಹೇಳಿದರು. ಇದನ್ನೂ ಓದಿ: ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಸತ್ಯದೇವಾನಂದ ಸರಸ್ವತಿ
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಮಾಜಿ ಶಾಸಕರಾದ ರಾಜು ಕಾಗೆ, ಎ.ಬಿ. ಪಾಟೀಲ್, ಕಾಂಗ್ರೆಸ್ ಮುಖಂಡರಾದ ಮಹಾವೀರ ಮೋಹಿತೆ, ಬಾಲಚಂದ್ರ ಇನಾಮದಾರ, ರವಿ ಮಾಳಿ ಉಪಸ್ಥಿತರಿದ್ದರು.