ಸ್ಯಾಂಡಲ್‌ವುಡ್ ನಟ ನಿಖಿಲ್ ಕುಮಾರಸ್ವಾಮಿ (Nikhil Kumarswamy) ದಂಪತಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ರೇವತಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಮನೆ ಮೇಲೆ ದಾಳಿ- ಪ್ರತಿಭಟಿಸಿದ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ
Advertisement
ಭಾರತದ ಹನ್ನೆರಡು ಪೂಜ್ಯ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವಂತಹ ಸ್ಥಳವಾದ ನಾಸಿಕ್‌ನಲ್ಲಿರುವ ಪವಿತ್ರ ತ್ರಯಂಬಕೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿತು. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಪವಿತ್ರ ಗೋದಾವರಿ ನದಿಯ ಮೂಲವಾದ ಭವ್ಯವಾದ ಬ್ರಹ್ಮಗಿರಿ ಬೆಟ್ಟಗಳ ತಳದಲ್ಲಿ ನೆಲೆಸಿದೆ. ಭಕ್ತರಿಗೆ ಮುಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ ಎಂದು ಅವರು ಬರೆದಿದ್ದಾರೆ. ಪ್ರೀತಿಸುವವರೊಂದಿಗೆ ಅಂತಹ ದೈವಿಕ ಶಕ್ತಿಯ ಇರುವಲ್ಲಿ ನಿಲ್ಲುವುದು ಒಂದೊಳ್ಳೆಯ ಅನುಭವ ಎಂದು ಅವರು ಬರೆದಿದ್ದಾರೆ. ಓಂ ನಮಃ ಶಿವಾಯ ಎಂದು ನಟ ಬರೆದುಕೊಂಡಿದ್ದಾರೆ.
Advertisement
View this post on Instagram
Advertisement
ಅಂದಹಾಗೆ, 2020ರಲ್ಲಿ ರೇವತಿ ಜೊತೆ ನಿಖಿಲ್ ಮದುವೆಯಾದರು. ಗಂಡು ಮಗುವಿನ ಪೋಷಕರಾಗಿದ್ದಾರೆ. ಪತಿಯ ರಾಜಕೀಯ ರಂಗದಲ್ಲಿ ಸಕ್ರಿಯರಾಗಿ ನಿಲ್ಲಲ್ಲು ಬೆಂಬಲವಾಗಿ ನಿಂತಿದ್ದಾರೆ.