ಭುವನೇಶ್ವರ: 1 ರಿಂದ 2 ಸಾವಿರ ಕಿಮೀ ವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಭಾರತದ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic Missile) `ಅಗ್ನಿ ಪ್ರೈಮ್’ (Agni Prime) ಪರೀಕ್ಷೆ ಯಶಸ್ವಿಯಾಗಿದೆ.
Advertisement
ಇಂದು ಒಡಿಶಾದಿಂದ ಮೇಡ್ ಇನ್ ಇಂಡಿಯಾದ (Made In India) ಹೊಸ ತಲೆಮಾರಿನ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಹೊಸ ತಲೆಮಾರಿನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ (APG Abdul Kalam Island) ಬೆಳಗ್ಗೆ 9.45ರ ಸುಮಾರಿಗೆ ಮೊಬೈಲ್ ಲಾಂಚರ್ ನಿಂದ ಕ್ಷಿಪಣಿಯನ್ನು ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡಿಸೆಂಬರ್‌ವರೆಗೂ ಹಲವರು ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರೆ: ಜಮೀರ್ ಸ್ಫೋಟಕ ಹೇಳಿಕೆ
Advertisement
Advertisement
ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ, ಕ್ಷಿಪಣಿಯು (Missile) ಗರಿಷ್ಠ ವ್ಯಾಪ್ತಿ ಪ್ರಯಾಣಿಸಿದೆ. ಎಲ್ಲಾ ಪರೀಕ್ಷಾ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಗ್ನಿ ಪ್ರೈಮ್ ಕ್ಷಿಪಣಿಯ ಈ ಸತತ 3ನೇ ಬಾರಿಗೆ ಯಶಸ್ವಿ ಹಾರಾಟ ನಡೆಸಿದ್ದು, ಈ ಮೂಲಕ ವ್ಯವಸ್ಥೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನೂ ಸ್ಥಾಪಿಸಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ
Advertisement
During the test flight, the missile travelled the maximum range and all test objectives were successfully met. With this third consecutive successful flight test of the Agni Prime missile, the accuracy and reliability of the system has been established: Defence officials
— ANI (@ANI) October 21, 2022
ರಾಡರ್, ಟೆಲಿಮೆಟ್ರಿ ಮತ್ತು ಎಲೆಕ್ಟ್ರೊ ಆಪ್ಟಿಕಲ್ ಟ್ರ‍್ಯಾಕಿಂಗ್ ಸಿಸ್ಟಮ್‌ಗಳಂತಹ ಹಲವಾರು ಶ್ರೇಣಿಯ ಉಪಕರಣಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಅಗ್ನಿ ಪ್ರೈಮ್ ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದೆ. ಸಂಪೂರ್ಣ ಪಥವನ್ನು ಕವರ್ ಮಾಡಲು ಟರ್ಮಿನಲ್ ಪಾಯಿಂಟ್‌ನಲ್ಲಿ ಎರಡು ಡೌನ್ ರೇಂಜ್ ಹಡಗುಗಳನ್ನು ಒಳಗೊಂಡಂತೆ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕ್ಷಿಪಣಿಯು 1 ಸಾವಿರ ಕಿಮೀ ನಿಂದ 2 ಸಾವಿರ ಕಿಮೀ ವರೆಗೆ ದಾಳಿಯ ಸಾಮರ್ಥ್ಯವನ್ನು ಹೊಂದಿದೆ. 2021ರ ಡಿಸೆಂಬರ್ 18ರಂದು ಇದೇ ನೆಲೆಯಿಂದ ಕ್ಷಿಪಣಿಯ ಕೊನೆಯ ಪ್ರಯೋಗ ನಡೆಸಲಾಗಿತ್ತು.