ಚಂಡೀಗಢ: ಭಯೋತ್ಪಾದನೆಯನ್ನು ನಿಗ್ರಹಿಸಲು ನಿಮ್ಮಿಂದಾಗದಿದ್ದರೆ ಹೇಳಿ, ಭಯೋತ್ಪಾದಕರ ವಿರುದ್ಧ ನಾವು ಹೋರಾಡುತ್ತೇನೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.
ಹರ್ಯಾಣದ ಸೋನಿಪತ್ ನಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಪಾಕಿಸ್ತಾನವು ತನ್ನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿಂದ್ದರೆ ಈ ಹಿಂದೆ ಎರಡು ಭಾಗವಾಗಿ ವಿಂಗಡಿಸಿದ್ದ ಪಾಕಿಸ್ತಾನವನ್ನು ಈಗ ಹಲವು ಭಾಗಗಳನ್ನಾಗಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Advertisement
हरियाणा में आज तीन चुनावी जनसभाओं को सम्बोधित करने के दौरान मैंने केंद्र और प्रदेश की सरकारों द्वारा कराए गए विकास एवं सुशासन की चर्चा की।
पिछली सरकारों द्वारा खड़ा किए भ्रष्टाचार-तंत्र को मनोहरलाल खट्टर की सरकार ने ध्वस्त किया है और बिना पर्ची और खर्ची के युवाओं को नौकरी दी है। pic.twitter.com/6nJO0mf72C
— Rajnath Singh (@rajnathsingh) October 13, 2019
Advertisement
ಭಯೋತ್ಪಾದನೆ ನಿಗ್ರಹಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಮೂಲಕ ಉಭಯ ದೇಶಗಳ ಸ್ನೇಹ-ಸಂಬಂಧ ವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ. ನಮ್ಮದು ನೆರೆ-ಹೊರೆಯ ದೇಶ. ನಾವು ಒಗ್ಗಟ್ಟಾಗಿ ಸಾಗಬೇಕಿದೆ ಎಂದು ಪಾಕಿಸ್ತಾನವನ್ನು ಕುಟುಕಿದರು.
Advertisement
ಉಗ್ರರ ವಿರುದ್ಧ ಹೋರಾಡುವ ಸಾಮಥ್ರ್ಯವಿಲ್ಲದಿದ್ದರೆ ಹೇಳಿ. ಭಯೋತ್ಪಾಸಕರ ವಿರುದ್ಧ ಹೋರಾಡವು ನಾವು ಶಕ್ತವಾಗಿದ್ದೇವೆ. ಕಾಶ್ಮೀರದಲ್ಲಿ ಇರುವ ಆತಂಕವಾದವನ್ನು ಮೊದಲು ಹೊಗಲಾಡಿಸಬೇಕಿದೆ ಎಂದು ಹೇಳಿದರು.