ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಪ್ರಚಾರ ಕಣ ರಂಗೇರಿದೆ. ರೊಡ್‍ಶೋಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪ್ರಚಾರಕ್ಕಾಗಿ ನೂತನ ಅಸ್ತ್ರ ಪ್ರಯೋಗಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೀ ಪ್ಲೇನ್ ಬಳಸಲಾಗಿದೆ. ಸೀ ಪ್ಲೇನ್ ಮೂಲಕ ಸಬರ್‍ಮತಿ ನದಿಯಿಂದ 180 ಕಿ.ಮೀ ದೂರದಲ್ಲಿರುವ ಧಾರೋಯ್ ಡ್ಯಾಮ್‍ಗೆ ಮೋದಿ ತೆರಳಿದ್ದಾರೆ.
Advertisement
ನದಿಯಿಂದ ವಿಮಾನ ಟೇಕ್ ಆಫ್ ಆಗಿದ್ದು, ಅಂಬಾಜಿ ಮಾತೆ ದೇಗುಲಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಮತ್ತೆ ಅದೇ ಮಾರ್ಗವಾಗಿ ಅಹಮದಾಬಾದ್‍ಗೆ ಹಿಂದಿರುಗಲಿದ್ದಾರೆ. ವಿಶೇಷ ಸೀ ಪ್ಲೇನ್ ಪ್ರಧಾನಿ ಮೋದಿಯನ್ನು ಹೊತ್ತು ನದಿಯ ಮೇಲೆ ತೇಲುತ್ತಾ ಸಾಗಿತು.
Advertisement
#WATCH: Sea plane takes off from Sabarmati river with PM Modi onboard, to reach Dharoi Dam pic.twitter.com/DeHpQX7UvV
— ANI (@ANI) December 12, 2017
Advertisement
ಈ ಸಣ್ಣ ವಿಮಾನ 9 ರಿಂದ 15 ಜನರನ್ನ ಹೊತ್ತೊಯ್ಯಬಹುದಾದ ಸಾಮಥ್ರ್ಯ ಹೊಂದಿದೆ. ಟೇಕ್ ಆಫ್ ಹಾಗೂ ಲ್ಯಾಂಡಿಂಗ್‍ಗಾಗಿ ಈ ವಿಮಾನಕ್ಕೆ ಕೇವಲ 300 ಮೀಟರ್‍ನಷ್ಟು ಉದ್ದದ ರನ್‍ವೇ ಇದ್ದರೆ ಸಾಕು. ಈ ವಿಮಾನದಲ್ಲಿ ಫ್ಲೋಟ್‍ಗಳು ಇದ್ದು ನೀರಿನ ಮೇಲೆ ಲ್ಯಾಂಡ್ ಆಗಲು ನೆರವಾಗುತ್ತದೆ.
Advertisement
ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಅಶೋಕ್ ಗಜಪತಿರಾಜು ಇನ್ನಿತರ ಅಧಿಕಾರಿಗಳೊಂದಿಗೆ ಸೇರಿ ವಿಮಾನದ ಪ್ರಾತ್ಯಕ್ಷಿಕೆ ನಡೆಸಿದ್ದರು.
ಸೋಮವಾರವಷ್ಟೇ ಪ್ರಧಾನಿ ಮೋದಿ ಸೀ ಪ್ಲೇನ್‍ನಲ್ಲಿ ಪ್ರಯಾಣಿಸುವ ಬಗ್ಗೆ ಟ್ವೀಟ್ ಮಾಡಿದ್ದರು. ವಿಮಾನ, ರಸ್ತೆ ಮತ್ತು ರೈಲ್ವೆ ಸಂಪರ್ಕಗಳ ಜೊತೆ ನಮ್ಮ ಸರ್ಕಾರ ಜಲಮಾರ್ಗಗಳ ಬಳಕೆಗೆ ಶ್ರಮ ವಹಿಸುತ್ತಿದೆ. ಇದು 125 ಕೋಟಿ ಭಾರತೀಯರಿಗಾಗಿ ಎಂದು ಮೋದಿ ಟ್ವೀಟ್‍ನಲ್ಲಿ ಹೇಳಿದ್ದರು.
ಅಹಮದಾಬಾದ್‍ನಲ್ಲಿ ಇಂದು ನಡೆಯಬೇಕಿದ್ದ ಮೋದಿ ರೋಡ್ ಶೋಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸೀ ಪ್ಲೇನ್ ಮೂಲಕ ಮೋದಿ ಪ್ರಯಾಣಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಗಮನ ಸೆಳೆಯುವುದು ಉದ್ದೇಶವಾಗಿದೆ.
ಪ್ರಧಾನಿ ಮೋದಿ ಹಾಗೂ ನೂತನವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಇಂದು ಅಹಮದಾಬಾದ್‍ನಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದ್ದರು. ಅದ್ರೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗುಜರಾತ್ ಪೊಲೀಸ್ ರೋಡ್ ಶೋ ಗೆ ಅನುಮತಿ ನಿರಾಕರಿಸಿತ್ತು.
https://twitter.com/ANI/status/940463701030723590
#WATCH: PM Modi reaches Dharoi Dam via sea plane, will visit Ambaji temple #Gujarat pic.twitter.com/pTcgooLfQA
— ANI (@ANI) December 12, 2017
#WATCH LIVE: Prime Minister Narendra Modi travels from Sabarmati River in Ahmedabad to Dharoi Dam via sea plane https://t.co/eaTMyfEEzf
— ANI (@ANI) December 12, 2017
Prime Minister Narendra Modi arrives, will travel from Sabarmati River in Ahmedabad to Dharoi Dam, via sea plane #Gujarat pic.twitter.com/fH7S3BSjW4
— ANI (@ANI) December 12, 2017
Prime Minister Narendra Modi to begin his travel via sea plane from Sabarmati River in Ahmedabad to Dharoi Dam pic.twitter.com/kOVWEFOyoH
— ANI (@ANI) December 12, 2017
#Gujarat: Prime Minister Narendra Modi boards sea plane from Sabarmati River in Ahmedabad to reach Dharoi Dam pic.twitter.com/MkbBZTYXFD
— ANI (@ANI) December 12, 2017
Today is a historic day as PM traveled in a #seaplane. It will be a big revolution in the transport sector as India has huge potential: Nitin Gadkari,Union Minister pic.twitter.com/lfqiBHouGC
— ANI (@ANI) December 12, 2017
As per rules and regulations, PM can use any transport facility(#seaplane), it has nothing to do with #GujaratElection2017 .If Rahul Gandhi wants he can also use it,no politics in it: Nitin Gadkari,Union Minister pic.twitter.com/dREHLqZgdy
— ANI (@ANI) December 12, 2017
#Visuals from Dharoi Dam: Prime Minister Narendra Modi will be travelling from Sabarmati River in Ahmedabad to Dharoi Dam, via sea plane #Gujarat pic.twitter.com/9icKkwGEu3
— ANI (@ANI) December 12, 2017
#Visuals from Ambaji Temple in Banaskantha, to be visited by Prime Minister Narendra Modi today #Gujarat pic.twitter.com/WJifctP0jp
— ANI (@ANI) December 12, 2017
Tomorrow at 9:30 AM I will travel from Sabarmati River in Ahmedabad to Dharoi Dam via sea plane. After that will offer prayers to Maa Amba at Ambaji. With air, roads & rail connectivity, our Government is making efforts for harnessing waterways. All this is for 125 crore Indians!
— Narendra Modi (@narendramodi) December 11, 2017
The transformation across Gujarat is for everyone to see. Sadly, Congress’ notion of development is making a quick buck and that is why they are unable to see any change for the better.
— Narendra Modi (@narendramodi) December 11, 2017