ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.
ಕೊನೆಯ ದಿನವಾದ ಶನಿವಾರ ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು. ಮಹಿಳೆಯರ ಸ್ಕ್ವಾಶ್ ತಂಡ ಬೆಳ್ಳಿ ಪದಕ ಗೆದ್ದರೆ ಬಾಕ್ಸಿಂಗ್ ನಲ್ಲಿ ಅಮಿತ್ ಪಾಂಗಲ್ ಮತ್ತು ಬ್ರಿಡ್ಜ್ ಗೇಮ್(ಇಸ್ಪೀಟ್) ನಲ್ಲಿ ಪುರುಷರ ತಂಡ ಚಿನ್ನವನ್ನು ಗೆದ್ದುಕೊಂಡಿದೆ.
Advertisement
2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್ ಗೇಮ್ಸ್‌ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?
Advertisement
Advertisement
2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ, 36 ಕಂಚು ಸೇರಿ 57 ಪದಕ ಜಯಿಸಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ಕ್ರೀಡಾಪಟುಗಳು 57 ಪದಕ ಜಯಿಸಿದ್ದರೂ, ಗೆದ್ದ ಚಿನ್ನದ ಪದಕಗಳ ಸಂಖ್ಯೆ 13 ಆಗಿತ್ತು. 2006ರ ದೋಹಾದಲ್ಲಿ ನಡೆದ ಕ್ರೀಡಾಕೂಟದಲ್ಲಿ 53 ಹಾಗೂ 1962ರ ಜರ್ಕಾತದಲ್ಲಿ 52 ಪದಕಗಳನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್
Advertisement
ಭಾರತದ ಅಥ್ಲೆಟ್ ಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದು ಒಟ್ಟು 7 ಚಿನ್ನ, 10 ಬೆಳ್ಳಿ, 2 ಕಂಚನ್ನು ಗೆಲ್ಲುವ ಮೂಲಕ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಅಥ್ಲೆಟಿಕ್ಸ್ ನಲ್ಲಿ ಮೂರನೇ ಸ್ಥಾನ ಸಂಪಾದಿಸಿದ್ದಾರೆ. ಶೂಟಿಂಗ್ ನಲ್ಲಿ 2 ಚಿನ್ನ ಸೇರಿ ಒಟ್ಟು 9 ಪದಕ ಗೆದ್ದಿದ್ದರೆ, ಕುಸ್ತಿಯಲ್ಲ 2 ಚಿನ್ನ ಸೇರಿ ಒಟ್ಟು 3 ಪದಕವನ್ನು ಗೆದ್ದುಕೊಂಡಿದೆ.
ಚಿನ್ನ ನಿರೀಕ್ಷಿಸಿದ್ದ ಕಬಡ್ಡಿ, ಹಾಕಿ, ಬಾಕ್ಸಿಂಗ್ ನಲ್ಲಿ ಕಂಚು, ಬೆಳ್ಳಿ ಪದಕ ಸಿಕ್ಕಿದ್ದರೆ, ಟೇಬಲ್ ಟೆನಿಸ್, ಸೈಲಿಂಗ್ (ಹಾಯಿದೋಣಿ) ಬ್ರಿಡ್ಜ್ (ಇಸ್ಪೀಟ್), ಈಕ್ವೇಸ್ಟ್ರಿಯನ್ (ಕುದುರೆ ಸವಾರಿ), ಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಿರುವುದು ವಿಶೇಷ. ಇದನ್ನೂ ಓದಿ:ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!
289 ಪದಕ ಪಡೆಯುವ ಮೂಲಕ ಚೀನಾ ಮೊದಲ ಸ್ಥಾನ ಪಡೆದರೆ ಸಿರಿಯಾ ಕೊನೆಯ 37ನೇ ಸ್ಥಾನ ಪಡೆದಿದೆ. 4 ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದೆ.