ಚಳಿಗಾಲದಲ್ಲಿ ತ್ವಚೆ ಒಣಗುವುದು, ಹಿಮ್ಮಡಿಗಳು ಬಿರುಕು ಬಿಡುವುದು, ಮುಖದಲ್ಲಿ ಕಾಂತಿ ಕಡಿಮೆಯಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು ಈ ಎಲ್ಲಾ ಸಮಸ್ಯೆಗಳು ಸಹಜವಾಗಿ ಬಹುತೇಕ ಜನರು ಎದುರಿಸುತ್ತಾರೆ. ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ಈ ಸುಲಭ ಕ್ರಮಗಳನ್ನ ಅನುಸರಿಸಿದರೆ ಚಳಿಗಾಲದ ಸಮಸ್ಯೆಯಿಂದ ದೂರ ಆಗಬಹುದು.
1. ಚಳಿಯಿಂದ ರಕ್ಷಣೆ:
ನಿಮ್ಮನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಆದಷ್ಟು ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನ ಧರಿಸಿರಿ. ಸಾಧ್ಯವಾದಷ್ಟು ಬಿಸಿಲಿನಿಂದ ದೂರವಿರಿ. ಹೊರಗಡೆ ಹೋಗುವಾಗ ನಿಮ್ಮ ಜೊತೆ ಒಂದು ಸನ್ ಗ್ಲಾಸ್ ಮತ್ತು ಮಾಯಿಶ್ಚರೈಜರ್ ಕ್ರೀಂ ಇಟ್ಟುಕೊಳ್ಳಿ.
Advertisement
2. ನೀರನ್ನ ಹೆಚ್ಚು ಕುಡಿಯಿರಿ:
ಚಳಿಗಾಲದಲ್ಲಿ ದೇಹದಲ್ಲಿನ ನೀರಿನಾಂಶ ಕಡಿಮೆ ಆಗುತ್ತಿರುತ್ತದೆ. ಹಾಗಾಗಿ ನೀರನ್ನು ಕುಡಿಯುತ್ತೀರಿ. ಇದರಿಂದ ನಿಮ್ಮ ಚರ್ಮದ ಕೋಮಲತೆಯನ್ನು ಕಾಪಾಡಬಹುದು.
Advertisement
Advertisement
3. ಮುಖದ ರಕ್ಷಣೆ:
ಚಳಿಗಾಲದಲ್ಲಿ ನಾವು ಯಾವಾಗಲು ಅತಿಯಾದ ಬಿಸಿ ನೀರನಲ್ಲಿ ಸ್ನಾನ ಮಾಡಲು ಇಷ್ಟಪಡುತ್ತೇವೆ. ಆದರೆ ಇದು ನಿಮಗೆ ಗೊತ್ತಿರಲಿ, ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಮತ್ತು ಸುಕೋಮಲತೆ ಕಡಿಮೆಯಾಗುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರನಲ್ಲಿ ಮುಖ ತೊಳೆಯುವುದು ಉತ್ತಮ.
Advertisement
4. ವಾರಕ್ಕೊಮ್ಮೆ ಎಣ್ಣೆ ಸ್ನಾನ:
ಎಣ್ಣೆ ಸ್ನಾನ ಮಾಡುವುದರಿಂದ ನಮ್ಮ ದೇಹದ ಆಯಾಸ ಕಡಿಮೆಯಾಗಿ ಮಾಂಸ ಖಂಡಗಳು ಬಲಗೊಳ್ಳುತ್ತದೆ. ಇದಲ್ಲದೆ ಚರ್ಮದಲ್ಲಿ ಎಣ್ಣೆ ಅಂಶವನ್ನ ಹೆಚ್ಚಿಸಲಿದ್ದು, ಇದರಿಂದ ಸುಕ್ಕುಗಳು, ನೆರೆಗೆ, ಮತ್ತು ತ್ವಚೆ ಬಿರುಕು ಬಿಡುವುದರಿಂದ ರಕ್ಷಿಸುತ್ತದೆ.
5. ನಿಮ್ಮ ಕಾಲುಗಳಿಗೆ ಕಾಳಜಿ ನೀಡಿ:
ಚಳಿಗಾಲದಲ್ಲಿ ಕೈ-ಕಾಲುಗಳನ್ನ ಆದಷ್ಟು ಮಾಯಿಶ್ಚರಾಜರ್ ಹಾಕಿ. ಮನೆಯಲ್ಲಿದ್ದಾಗ ಕಾಲುಗಳಿಗೆ ಸಾಕ್ಸ್ ಹಾಕಿ ಬೆಚ್ಚನೆ ಇರಿಸಿ. ಒಡೆದ ಹಿಮ್ಮಡಿಗಳಿಗೆ ವ್ಯಾಸ್ಲೀನ್ ಜೆಲ್ ಹಚ್ಚಿರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews