ಬೆಳಗಾವಿ: ಜಿಲ್ಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಲ್ಲಿಗೆ ಬಂದ ಅಧಿಕಾರಿಗಳು ವೀಕೆಂಡ್ ನಲ್ಲಿ ಮೋಜು-ಮಸ್ತಿ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇರಿಸುಮುರುಸು ಉಂಟಾಗಿದೆ.
ಚಳಿಗಾಲದ ಅಧಿವೇಶನ ಡಿಸೆಂಬರ್ 10 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದೆ. ಆದರೆ ಅಧಿವೇಶನಕ್ಕೆ ಬಂದ ಅಧಿಕಾರಿಗಳು ಬೆಳಗಾವಿಯಿಂದ ಸ್ವಲ್ಪ ದೂರದಲ್ಲಿರುವ ಗೋವಾದ ಜೂಜು-ಅಡ್ಡೆಗೆ ಹೋಗಿದ್ದಾರೆ. ಅಲ್ಲದೇ ಅಲ್ಲಿ ಅಧಿಕಾರಿಗಳು ಅರೆಬೆತ್ತಲಾಗಿ ಮೋಜು-ಮಸ್ತಿ ಮಾಡಿದ್ದಾರೆ. ವೀಕೆಂಡ್‍ನಲ್ಲಿ ಅನುಮತಿಯಿಲ್ಲದೆ ಅಧಿಕಾರಿಗಳ ಮೋಜು-ಮಸ್ತಿ ಮಾಡಿದ್ದು, ಜೂಜು ಅಡ್ಡೆಗೆ ಹೋಗುವಾಗ ಕೆಲವರು ಖಾಸಗಿ ವಾಹನದಲ್ಲಿ ಹೋಗಿದ್ದಾರೆ. ಉಳಿದವರು ಸರ್ಕಾರಿ ವಾಹನದಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಗೋವಾದ ಕ್ಯಾಸಿನೋ ಪ್ರೈಡ್ ಮುಂದೆ ಸಿಎಂ ಸಚಿವಾಲಯದ ಅಧಿಕಾರಿಗಳು ಮೋಜು-ಮಸ್ತಿ ಮಾಡಿದ್ದು, ಕ್ಯಾಸಿನೋ ಮುಂದೆ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಮೋಜು-ಮಸ್ತಿಯ ವಿಡಿಯೋ ವೈರಲ್ ಆಗುತ್ತಿದ್ದು, ಈ ದೃಶ್ಯ ಪಬ್ಲಿಕ್ ಟಿವಿಗೂ ಲಭಿಸಿದೆ.
Advertisement
ಸಿಎಂ ಸಚಿವಾಲಯ ಅಧಿಕಾರಿಗಳು ಮತ್ತು ಭದ್ರತಾ ಪಡೆಯ ಇಬ್ಬರು ಪೊಲೀಸರು ಗೋವಾದ ಕ್ಯಾಸಿನೋ ಪ್ರೈಡ್ ಗೆ ಹೋಗಿದ್ದಾರೆ. ಅಧಿವೇಶನಕ್ಕೆ ಬಂದವರು ಅನುಮತಿ ಪಡೆಯದೇ ಹೊರಗಡೆ ಹೋಗುವಂತಿಲ್ಲ. ಆದರೂ ಅನುಮತಿ ಪಡೆಯದೇ ಗೋವಾದಲ್ಲಿ ಅಧಿಕಾರಿಗಳು ಜೂಜು ಅಡ್ಡೆಗೆ ಹೋಗಿ ಮೋಜು ಮಾಡಿದ್ದಾರೆ.
Advertisement
ಅಧಿವೇಶನ ಮುಗಿಯಲು ನಾಲ್ಕು ದಿನಗಳಿದ್ದು ಉಳಿದ ಅಧಿಕಾರಿಗಳು ಅಧಿವೇಶನಕ್ಕೆ ಬೇಕಾದ ಮಾಹಿತಿ, ದಾಖಲೆಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಈ ರೀತಿಯಾಗಿ ಜೂಜು ಅಡ್ಡೆಗೆ ಹೋಗಿ ಮೋಜು-ಮಸ್ತಿ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ಈ ವರ್ತನೆಯ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv