– 9 ಕಂಪನಿಗಳಿಂದ ಒಟ್ಟು 1,492.18 ಕೋಟಿ ರೂ. ಬಡ್ಡಿ, ದಂಡ ಬಾಕಿ
ಬೆಂಗಳೂರು: ಬ್ರಿಟಿಷರ ಕಾಲದಲ್ಲಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಗೆ ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿರುವ ಸುಮಾರು 5,150 ಎಕರೆ ಅರಣ್ಯ ಭೂಮಿಯ(Forest Land) ಮರು ವಶಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದ್ದಾರೆ.
Advertisement
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕುಶಾಲಪ್ಪ (Kushalappa) ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರ ನೀಡಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಮರ್ಕೆರಾ ರಬ್ಬರ್ ಕಂಪನಿ (1074 ಎಕರೆ), ನೀಲಾಂಬುರ್ ರಬ್ಬರ್ ಕಂಪನಿಗೆ (713.03 ಎಕರೆ), ಥಾಮ್ಸನ್ ರಬ್ಬರ್ ಕಂಪನಿ (625 ಎಕರೆ), ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿ (1289.29 ಎಕರೆ), ಟಾಟಾ ಕಾಫಿ ಲಿ. (923.378 ಎಕರೆ), ಗೈನ್ ಲೋರೆನ್ ಪ್ಲಾಂಟೇಷನ್ (279.748 ಎಕರೆ), ಚಾಮರಾಜನಗರ ಜಿಲ್ಲೆಯ ಎಮರಾಲ್ಡ್ ಹೆವೆನ್ ಎಸ್ಟೇಟ್, ಬೇಡಗುಳಿ (37.25 ಎಕರೆ), ಬಿಳಿಗಿರಿ ರಂಗನ ಎಸ್ಟೇಟ್, ಬೇಡಗುಳಿ (25 ಎಕರೆ), ನೀಲಗಿರಿ ಪ್ಲಾಂಟೇಷನ್ ಲಿ. ಹೊನ್ನಮೇಟಿ 184 ಎಕರೆ ಸೇರಿ ಒಟ್ಟು 5150 ಎಕರೆ ಜಮೀನನ್ನು ಗುತ್ತಿಗೆ ನೀಡಲಾಗಿದೆ ಎಂದು ವಿವರಿಸಿದರು.
Advertisement
Advertisement
ಈ ಕಂಪನಿಗಳು ಹಲವು ದಶಕಗಳಿಂದ ಗುತ್ತಿಗೆ ಹಣವನ್ನೂ ಪಾವತಿಸಿರುವುದಿಲ್ಲ. ಈ 9 ಕಂಪನಿಗಳಿಂದ ಇಲಾಖೆಗೆ ಬಡ್ಡಿ ಮತ್ತು ದಂಡ ಸೇರಿ ಒಟ್ಟು 1492.18 ಕೋಟಿ ರೂ. ಬರಬೇಕಿದೆ ಎಂದೂ ತಿಳಿಸಿದರು. ಕಂಪನಿಗಳು ತಮಗೆ 999 ವರ್ಷಗಳಿಗೆ ಲೀಸ್ ನೀಡಲಾಗಿತ್ತು ಎಂದು ಕಂಪನಿಗಳು ವಾದಿಸುತ್ತಿದ್ದವು. 2012ರಲ್ಲಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿ ಈ ಗುತ್ತಿಗೆ ಅವಧಿಯನ್ನು 99 ವರ್ಷಕ್ಕೆ ತಗ್ಗಿಸಿದ್ದು, ಅವಧಿ ಮುಗಿದ ಗುತ್ತಿಗೆ ಅರಣ್ಯ ಭೂಮಿಯ ಮರು ವಶಕ್ಕೆ ನೋಟಿಸ್ ನೀಡಿತ್ತು. ಆ ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದು, ಪ್ರಸ್ತುತ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇದೇ ಡಿ.12ರಂದು ವಿಚಾರಣೆಗೆ ಬರಲಿದೆ ಎಂದೂ ಮಾಹಿತಿ ನೀಡಿದರು.
Advertisement
ತಾವು ಸಚಿವರಾದ ಬಳಿಕ ಗುತ್ತಿಗೆ ಅರಣ್ಯ ಭೂಮಿಯ ಮರು ವಶಕ್ಕೆ ಪಡೆಯಲು 5 ಜನ ಸದಸ್ಯರ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಪಡೆಯು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ, ದಾಖಲೆಗಳನ್ನು ಒಗ್ಗೂಡಿಸಿ ಭೂಮಿ ಮರಳಿ ಪಡೆಯಲು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ
ವಿವಿಧ ಉದ್ದೇಶಗಳಿಗೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಿರುವ ಪ್ರಕರಣಗಳ ಪರಿಶೀಲನೆ, ಗೇಣಿ ವಸೂಲಾತಿ, ಅರಣ್ಯ ಪ್ರದೇಶವನ್ನು ಇಲಾಖೆಗೆ ಹಿಂಪಡೆಯುವ ಬಗ್ಗೆ ಕಾರ್ಯಪಡೆ ಅಧ್ಯಕ್ಷರು ಮತ್ತು ಸದಸ್ಯರು ಹಲವು ಸಭೆ ನಡೆಸಿ, ಆದ್ಯತೆಯ ಆಧಾರದಲ್ಲಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲು ಶ್ರಮಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡ್ ರದ್ದು: ಮುನಿಯಪ್ಪ