ಬೆಂಗಳೂರು: ಡಿಸೆಂಬರ್ 4ರಿಂದ ಡಿಸೆಂಬರ್ 15 ರವರೆಗೆ ಚಳಿಗಾಲ ಅಧಿವೇಶನ (Winter Session) ನಡೆಸುವುದಾಗಿ ಇಂದಿನ (ಗುರುವಾರ) ಸಚಿವ ಸಂಪುಟದಲ್ಲಿ (Cabinet Meeting) ತೀರ್ಮಾನಿಸಲಾಗಿದೆ.
ಈ ಹಿಂದೆ ನವೆಂಬರ್ ಕೊನೇ ವಾರದಲ್ಲಿ ಅಧಿವೇಶನ ಆರಂಭಿಸಿ, ಬೆಂಗಳೂರಿನಲ್ಲಿ 10 ದಿನ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನ ಕಲಾಪ ನಡೆಸುವ ಬಗ್ಗೆ ಚಿಂತನೆ ನಡೆದಿತ್ತು ಎನ್ನಲಾಗಿತ್ತು. ಆದರೆ ಇಂದು ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸುವುದಾಗಿ ನಿರ್ಧಾರ ಕೈಗೊಳ್ಳಲಾಯಿತು. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ವ್ಯಕ್ತಿ ಯಾರು ಅಂತಲೇ ಗೊತ್ತಿಲ್ಲ: ಶರಣ ಪ್ರಕಾಶ್ ಪಾಟೀಲ್
ಡಿಸೆಂಬರ್ 3 ರಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳಲಿದೆ. ಈ ಬೆನ್ನಲ್ಲೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 15 ರ ನಂತರ ಶೂನ್ಯ ಮಾಸ ಕಾರಣ ಈ ದಿನಗಳಲ್ಲಿ ಸರ್ಕಾರ ಅಧಿವೇಶನ ನಡೆಸಲ್ಲ. ಇನ್ನು ನವೆಂಬರ್ ನಲ್ಲಿ ದೀಪಾವಳಿ ರಜೆ, ಕನಕ ಜಯಂತಿ ಇರುವುದರಿಂದ ಅಧಿವೇಶನ ನಡೆಸಲು 10 ದಿನಗಳು ಸಿಗಲ್ಲ. ಈ ಎಲ್ಲಾ ಕಾರಣಗಳಿಂದ ಡಿಸೆಂಬರ್ 4 ರಿಂದ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]