-ನಿಯೋಜಿತ ಮದುವೆಗಳಿಗೆ ಶುರುವಾಗಿದೆ ಸಂಕಷ್ಟ!
ಬೆಳಗಾವಿ: ಕುಂದಾ ನಗರರಯಲ್ಲಿ ನಿಗದಿಯಾದ 60 ಮದುವೆಗಳ ಮೇಲೆ ಅಧಿವೇಶನದ ಕರಿನೆರಳು ಬಿದ್ದಿದೆ. ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಆಗುತ್ತಿದ್ದಂತೆ ಮದುವೆ ಮಾಡೋರಿಗೆ ಟೆನ್ಶನ್ ಶುರುವಾಗಿದೆ.
ಡಿಸೆಂಬರ್ 10ರಿಂದ 21ರವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶ ನಡೆಯಲಿದೆ. ಡಿಸೆಂಬರ್ ತಿಂಗಳಿನ 09, 12, 14, 16, 17, 18, 23ರಂದು ಮದುವೆಗೆ ಒಳ್ಳೆಯ ಲಗ್ನ ಮುಹೂರ್ತಗಳಿದ್ದು, ಬೆಳಗಾವಿ ನಗರದಲ್ಲಿ ಮದುವೆಗಳು ಈಗಾಗಲೇ ಫಿಕ್ಸ್ ಆಗಿದೆ. ಈ ಸಮಯದಲ್ಲಿ ದೂರದ ಊರಿನಿಂದ ಮದುವೆಗೆ ಬರೋ ಬೀಗರಿಗೆ ವಸತಿ ವ್ಯವಸ್ಥೆ ಬೇಕು. ಆದರೆ ಅಧಿವೇಶನ ಇರೋದ್ರಿಂದ ಬೆಳಗಾವಿಯಲ್ಲಿನ ಎಲ್ಲಾ ವಸತಿ ನಿಲಯಗಳು, ಲಾಡ್ಜ್ ಗಳನ್ನು ಬೆಳಗಾವಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
ಅಧಿವೇಶನ ದಿನಾಂಕ ನಿಗದಿ ಆಗೋದಕ್ಕಿಂತ ಮುಂಚೆಯೇ ಎಲ್ಲಾ ಮದುವೆ ದಿನಾಂಕಗಳು ಫಿಕ್ಸ್ ಆಗಿದೆ. ಅದರಂತೆ ಮದುವೆ ಮನೆಯವರು ಆವತ್ತೆ ಎಲ್ಲಾ ಚೌಟರಿಗಳನ್ನು, ಲಾಡ್ಜ್ ಗಳನ್ನು ಬುಕ್ ಮಾಡಿದ್ದಾರೆ. ಜಿಲ್ಲಾಡಳಿತ ಎಲ್ಲಾ ಲಾಡ್ಜ್ ಮಾಲೀಕರ ಸಭೆ ಕರೆದು ರೂಂಗಳನ್ನು ವಶಕ್ಕೆ ಪಡೆದಿದೆ. ಹೀಗಾಗಿ 60ಕ್ಕೂ ಹೆಚ್ಚು ಮದ್ವೆಗಳಿಗೆ ಅಧಿವೇಶನದ ದಿನಾಂಕ ಅಡ್ಡಿಯಾಗಿದೆ. ಅಧಿವೇಶನ ದಿನಾಂಕ ನಿಗದಿಗೂ ಮುನ್ನ ಈ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕಿತ್ತು ಅಂತ ಆರ್ ಟಿಐ ಕಾರ್ಯಕರ್ತ ಭೀಮಶಿ ಆರೋಪಿಸಿದ್ದಾರೆ.
ಮದುವೆ ಡೇಟ್ ಫಿಕ್ಸ್ ಮಾಡಿಕೊಂಡ ಕುಟುಂಬಗಳು ಈ ಸಮಸ್ಯೆಯನ್ನು ನೀವೆ ಬಗೆಹರಿಸಿ ಅಂತ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಎಲ್ಲಾ ಲಾಡ್ಜ್ ಗಳು ಜಿಲ್ಲಾಡಳಿತದ ಸುಪರ್ದಿಯಲ್ಲಿದ್ದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂಬುದೇ ಯಕ್ಷ ಪ್ರಶ್ನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv


