ಬೆಳಗಾವಿ: ಅಧಿವೇಶನ (Session) ಆರಂಭವಾದಾಗಿನಿಂದ ಸದನದ ನಿಯಮ ಏನೂ ಇಲ್ಲ. ಯರದ್ದೋ ಅಣತಿಯಂತೆ ಸ್ಪೀಕರ್ ಯುಟಿ ಖಾದರ್ (UT Khader) ಸದನ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ ಆರೋಪಿಸಿದ್ದಾರೆ.
ಸುವರ್ಣ ಸೌಧದಲ್ಲಿ ಮಾತನಾಡಿದ ಅವರು ಸ್ಪೀಕರ್ ಕಾಂಗ್ರೆಸ್ ಶಾಸಕರಿಗೆ ಸ್ಚೇಚ್ಛಾಚಾರ ಬಿಟ್ಟಿದ್ದಾರೆ. ನಿಯಮದಲ್ಲಿ ವಕ್ಫ್ ಬೋರ್ಡ್ ಸಂಬಂಧ ನಿಲುವಳಿ ಸೂಚನೆ ಕೊಡಲಾಗಿದೆ. ನಾಲ್ಕು ದಿನ ಆಗಿದ್ದು ಉದ್ದೇಶಪೂರ್ವಕವಾಗಿ ಆಡಳಿತ ಪಕ್ಷಕ್ಕೆ ಈ ರೀತಿ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರೇ ಗಲಾಟೆ ಮಾಡುತ್ತಿದ್ದಾರೆ. ಶಾಸಕರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ. ಆ ಕೋಪನ್ನು ಸದನದ ಮೇಲೆ ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ನಾವು ಸದನದಿಂದ ಹೊರ ನಡೆದಿದ್ದೇವೆ ಎಂದು ದೂರಿದರು. ಇದನ್ನೂ ಓದಿ:ಕೇರಳ ಮಾದರಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ
Advertisement
Advertisement
ಸ್ಫೀಕರ್ ಆಡಳಿತ ಪಕ್ಷ ಸದಸ್ಯರ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಸದನದಲ್ಲಿ ಕುಳಿತು ಏನು ಪ್ರಯೋಜನ? ವಕ್ಫ್ ಸಂಬಂಧ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ನಿಯಮದ ಪ್ರಕಾರ ಮಾಡಲಿ, ವಕ್ಫ್ ಸಂಬಂಧ ಚರ್ಚೆಗೆ ಅವಕಾಶ ಕೊಟ್ಟ ಮೇಲೆ ಮುನಿರತ್ನ ಸಂಬಂಧ ಚರ್ಚೆಗೆ ಅವಕಾಶ ನೀಡಲಿ. ವಕ್ಫ್ ಬೋರ್ಡ್, ಬಾಣಂತಿ ವಿಚಾರ ಚರ್ಚೆಗೆ ಬರಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
ಸೋಮವಾರದಿಂದ ಸದನ ನಡೆದಿದೆ. ಯಾವುದೇ ನಿಯಮಗಳಂತೆ ಸದನ ನಡೆಯುತ್ತಿಲ್ಲ. ಇಂದು ಅಜೆಂಡಾದಲ್ಲಿ ವಕ್ಫ್ ವಿಚಾರ ಇದೆ. ನಾನು ಸೋಮವಾರ ಚರ್ಚೆಗೆ ಕೊಟ್ಟಿದ್ದೆ ಪ್ರಶ್ನೋತ್ತರ ಆಗುತ್ತಲೇ ನಿಲುವಳಿಗೆ ಕೊಡ್ತಾರೆ. ಹಿರಿಯರ ಚಿತಾವಣೆಯಂತೆ ಸದನ ನಡೆದಿದೆ. ಬೇಕೆಂದೇ ಸದನ ನಡೆಯದಂತೆ ತಡೆಯುತ್ತಿದ್ದಾರೆ. ಸದನದ ಸಮಯವನ್ನು ಹಾಳುಮಾಡ್ತಿದ್ದಾರೆ. ಅದಕ್ಕೆ ನಾವು ಸಭಾತ್ಯಾಗ ಮಾಡಿದ್ದೇವೆ ಎಂದರು.
Advertisement
ಸ್ಪೀಕರ್ ಮಾತಿಗೆ ಶಾಸಕರು ಬೆಲೆ ಕೊಡ್ತಿಲ್ಲ.ಅವರಿಗೆ ಸದನವನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ರೈತರು ಇಂದು ಸಾಯುತ್ತಿದ್ದಾರೆ. ಬಾಣಂತಿಯರ ಸಾವು ನಡೆದಿದ್ದು ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ನಾನು 26 ವರ್ಷಗಳಿಂದ ಸದನದಲ್ಲಿ ಇದ್ದೇನೆ ಇಂತಹ ಸನ್ನಿವೇಶ ನೋಡಿಲ್ಲ ಎಂದರು.