ನವದೆಹಲಿ: ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ (Gujarat Election) ಆಮ್ ಆದ್ಮಿ ಪಕ್ಷ (AAP) 5 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಶೇ.14 ರಷ್ಟು ಮತಗಳನ್ನು ಗಳಿಸಿದೆ. ಇದು ಎತ್ತುವಿನಿಂದ (Ox) ಹಾಲು ಕರೆದಷ್ಟು ಕಷ್ಟದ ಕೆಲಸವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಆಪ್ ರಾಷ್ಟ್ರೀಯ ಕೌನ್ಸಿಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಒಂದು ವರ್ಷದಲ್ಲಿ ನಾವು ಪಂಜಾಬ್ ಅನ್ನು ಪಡೆದುಕೊಂಡಿದ್ದೇವೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (MCD), ಗೋವಾದಲ್ಲಿ 2 ಶಾಸಕರು ಹಾಗೂ ಗುಜರಾತ್‌ನಲ್ಲಿ ಶೇ.14 ರಷ್ಟು ಮತಗಳನ್ನು ಪಡೆಯುವ ಮೂಲಕ ನಮ್ಮ 5 ಶಾಸಕರು ಗೆದ್ದಿದ್ದಾರೆ ಎಂದರು.
ಎಲ್ಲರೂ ಹಸುವಿನಿಂದ ಹಾಲು ಕರೆಯುತ್ತಾರೆ. ಆದರೆ ನಾವು ಎತ್ತುವಿನಿಂದ ಹಾಲು ಕರೆದಿದ್ದೇವೆ ಎಂದು ತಮ್ಮ ಪಕ್ಷದ ಸಾಧನೆಯನ್ನು ಕೊಂಡಾಡಿದ ಕೇಜ್ರಿವಾಲ್ 2027ರಲ್ಲಿ ಗುಜರಾತ್‌ನಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಈ ದೇಶಕ್ಕೂ ಏನು ಸಂಬಂಧ?: ಡಿಕೆಶಿಗೆ ಈಶ್ವರಪ್ಪ ತಿರುಗೇಟು
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಸರ್ಕಾರಕ್ಕೆ ಸೈನಿಕರ ಪ್ರಾಣದ ಬಗ್ಗೆ ಕಾಳಜಿಯೇ ಇಲ್ಲ. ಚೀನಾದ ವಸ್ತುಗಳನ್ನು ಯಾರು ಖರೀದಿಸುತ್ತಾರೆ? ಚೀನಾದಿಂದ ಸರಕುಗಳನ್ನು ಖರೀದಿಸಲು ಬಿಜೆಪಿಗೆ ಯಾರ ಒತ್ತಾಯವಿದೆ? ನಾವು ಇಲ್ಲಿ ಉತ್ಪಾದಿಸಬಹುದಾದ ವಸ್ತುಗಳನ್ನೇ ಚೀನಾದಿಂದ ಖರೀದಿಸುತ್ತೇವೆ. ಆದರೆ ನಮ್ಮ ದೇಶದಲ್ಲಿ ಉತ್ಪಾದಿಸಲಾಗುತ್ತಿಲ್ಲ. ನಾವು ನಮ್ಮ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೆ? ದಯವಿಟ್ಟು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕೇಜ್ರಿವಾಲ್ ಜನರಿಗೆ ಮನವಿ ಮಾಡಿದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ – ಶಾರೀಕ್‌ಗೆ ನಾಳೆ ಸರ್ಜರಿ