ಕಾರವಾರ: ಕರ್ನಾಟಕ ದ್ರಾಕ್ಷಾರಸ ಮಂಡಳಿ, ತೋಟಗಾರಿಕಾ ಇಲಾಖೆ ಹಾಗೂ ಸೆನ್ಸ್ ಕ್ರಿಯೇಷನ್ ಸಹಭಾಗಿತ್ವದಲ್ಲಿ ಮೂರು ದಿನಗಳ ವೈನ್ ಉತ್ಸವವನ್ನು ಕಾರವಾರದ ಕಾಳಿ ರಿವರ್ ಗಾರ್ಡನಿನಲ್ಲಿ ಆಯೋಜನೆ ಮಾಡಲಾಗಿತ್ತು.
ವಾರಾಂತ್ಯವಾದ ಕಾರಣ ಕರಾವಳಿ ಭಾಗದ ಜನರು ಸೇರಿದಂತೆ ನೆರೆಯ ಗೋವಾ ಮುಂಬೈ ಮಂದಿಯೂ ಈ ಉತ್ಸವದಲ್ಲಿ ವೈನ್ ಸವಿಯಲು ಮುಗಿ ಬಿದ್ದಿದ್ದರು. ಮಹಿಳೆಯರು ಪುರುಷರೆನ್ನದೇ ಎಲ್ಲರೂ ಈ ಉತ್ಸವದಲ್ಲಿ ಭಾಗಿಯಾಗಿ ವೈನ್ ಸವಿದವರು. ಮೇಳದಲ್ಲಿ 10 ರಿಂದ 12 ವೈನರಿಗಳು ಭಾಗವಹಿಸಿದ್ದು, 150 ವಿವಿಧ ಬ್ರಾಂಡ್‍ಗಳ ಪ್ರದರ್ಶನ, ಮಾರಾಟ ಹಾಗೂ ವೈನ್ ನಿಂದ ಆರೋಗ್ಯದಲ್ಲಿ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು.
Advertisement
Advertisement
ವೈನ್ ಮಿತ ಬಳಕೆ ಯಿಂದ ಪ್ರಯೋಜನ ಹೀಗಿವೆ:
ವೈನ್ ಎನ್ನುವುದು ಬಹುತೇಕರಿಗೆ ಮದ್ಯವೆಂದಷ್ಟೇ ತಿಳಿದುಕೊಂಡಿದ್ದಾರೆ ಇದನ್ನು ಕುಡಿಯುವುದರಿಂದ ಹಲವರು ಕೆಟ್ಟದ್ದು ಎನ್ನುತ್ತಾರೆ. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಇದರ ಪಾತ್ರ ಮಹತ್ವದಿದೆ. ಕೆಂಪು ದ್ರಾಕ್ಷಿ ವೈನ್ ಗಳು ಟ್ಯಾನಿನ್ ಗಳಿಂದ ವಯಸ್ಸಾಗುವುದನ್ನು ತಡೆಯುತ್ತವೆ. ಬಿಳಿ ದ್ರಾಕ್ಷಿ ವೈನ್ ಗಳು ಶ್ವಾಸಕೋಶದ ಕಾರ್ಯವನ್ನು ವೃದ್ಧಿಸುತ್ತವೆ. ಹೃದಯದ ಸಂಬಂಧಿ ರೋಗಗಳನ್ನು ನಿಯಂತ್ರಣದಲ್ಲಿ ಇಡುವುದರ ಜೊತೆ ರಕ್ತನಾಳಗಳನ್ನು ಆರೋಗ್ಯಕರವಾಗಿಡುತ್ತದೆ. ಅಲ್ಲದೇ ನಿಮ್ಮ ದೇಹದಲ್ಲಿ ಹುಣ್ಣುಗಳಾಗುತ್ತಿದ್ದರೇ ಅವುಗಳ ನಿಯಂತ್ರಣವನ್ನು ವೈನ್ ಗಳು ಮಾಡುತ್ತವೆ.
Advertisement
ಕೆಂಪು ದ್ರಾಕ್ಷಿ ವೈನ್ ಗಳು ಚರ್ಮದಲ್ಲಿರುವ ಪ್ರೋಟೀನ್ ನಿಂದ ಕ್ಯಾನ್ಸರ್ ಗೆ ಕಾರಣವಾಗಿರುವ ಜೀವಕೋಶವನ್ನು ಸಾಯಿಸುವ ಶಕ್ತಿ ಹೊಂದಿದೆ. ಮಹಿಳೆಯರ ಎಲುಬುಗಳ ಬಲವರ್ಧನೆಗೆ ಸಹಕಾರಿಯಾಗಿದ್ದು, ಹೃದಯ ಸ್ತಂಭನ ನಿಯಂತ್ರಣವನ್ನು ಭರಿಸುವ ಶಕ್ತಿ ಈ ವೈನ್‍ಗಿದೆ. ನರರೋಗಗಳಾದ ಅಲ್ಜೀಮರ್ಸ್, ಪಾರ್ಕಿನ್‍ಸನ್‍ಗಳಿಂದ ರಕ್ಷಿಸುವುದರ ಜೊತೆ ಮಲಬದ್ಧತೆ ತಡೆಗಟ್ಟುತ್ತದೆ. ಊಟದ ಜೊತೆ ಸೇವಿಸಿದರೆ ಪಚನ ಕ್ರಿಯೆ ಉತ್ತಮವಾಗಿರುತ್ತದೆ. ವೈನನ್ನು ಹಿತ ಮಿತವಾಗಿ ಸೇವಿಸಿ ನಿಮ್ಮ ಆರೋಗ್ಯ ಕಾಪಾಡಿ ಕೊಳ್ಳಬಹುದು.
Advertisement
ದೇಶ ದಿಂದಲ್ಲದೇ ವಿದೇಶದ ವೈನ್ ಗಳ ಪ್ರದರ್ಶನ:
ನಮ್ಮ ಕರ್ನಾಟಕದ ವೈನ್ ಗಳಲ್ಲದೇ ವೈನ್ ಗೆ ಪ್ರಸಿದ್ಧಿ ಪಡೆದ ಯುರೋಪ್ ಖಂಡ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕಾ ಹಾಗೂ ಇತರ ದೇಶದ ವೈನ್ ಗಳ ಮಾರಾಟ ಕೂಡ ಈ ಮೇಳದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವೈನ್ ತಯಾರಕರು ಹಾಗೂ ವೈನ್ ತಯಾರಿಕೆ ಬಗ್ಗೆ ತರಬೇತಿ ಮತ್ತು ತಯಾರಕರು ಹಾಗೂ ಸಾರ್ವಜನಿಕರ ನಡುವೆ ವಿಚಾರ ವಿನಿಮಯಕ್ಕೆ ಅವಕಾಶ ಸಹ ವೈನ್ ಬೋರ್ಡ್ ಕಲ್ಪಿಸಿಕೊಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv