ಉಡುಪಿ: ಜಿಲ್ಲೆಯ ಮಲ್ಪೆ ಬೀಚ್‍ನಲ್ಲಿ ವೈನ್ ಮೇಳ ನಡೆದಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಳೆದ ಬುಧವಾರದಿಂದ ಭಾನುವಾರದವರೆಗೆ ಈ ವೈನ್ ಮೇಳ ನಡೆದಿದೆ.
ಮೇಳದಲ್ಲಿ ಪ್ರಪಂಚದಲ್ಲಿ ಸಿಗೋ ಡಿಫರೆಂಟ್ ಡಿಫರೆಂಟ್ ವೈನ್‍ಗಳನ್ನ ಉಡುಪಿಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಿದೆ. ಈ ಮೂಲಕ ವೈನ್ ಪ್ರಿಯರಿಗೆ ಮಲ್ಪೆ ಕಡಲ ತೀರ ಹಬ್ಬವನ್ನೇ ಸೃಷ್ಟಿ ಮಾಡಿದೆ.
Advertisement
Advertisement
ಪ್ರೀಮಿಯಂ ರೆಡ್, ವಿಲ್ಲಾ 89, ರೆಡ್ಡೀಫ್, ಝಂಪಾ, ಬ್ಲ್ಯಾಕ್ ಬಕ್ಕ್ ಹೀಗೆ ದ್ರಾಕ್ಷಿಯಿಂದ ಮಾತ್ರ ತಯಾರಿಸಿದ ದೇಶ ವಿದೇಶದ ನೂರಾರು ವಿಧದ ವೈನ್‍ಗಳನ್ನು ಪ್ರದರ್ಶನ ಮಾಡಿ ಮಾರಾಟ ಮಾಡಿದ್ರು. ಮಲ್ಪೆ ಬೀಚ್‍ನಲ್ಲಿ ಓಪನಾಗಿ ವೈನ್ ಸಿಗುತ್ತೆ ಅಂದ್ರೆ ಕೇಳ್ಬೇಕಾ..? ಮಣಿಪಾಲದ ನೂರಾರು ವಿದ್ಯಾರ್ಥಿಗಳು ವೈನ್ ಸವಿಯಲು ಮುಗಿಬಿದ್ದಿದ್ದರು. ದ್ರಾಕ್ಷಿಯನ್ನು ಜಜ್ಜಿ ವೈನ್ ಮಾಡುವ ಪ್ರಾತ್ಯಕ್ಷಿಕೆಯೂ ನಡೆಯಿತು. ಬೀಚ್ ಪಕ್ಕದಲ್ಲಿ ವೈನ್ ಸವಿದು, ಬಿಸಿ ಬಿಸಿ ಫಿಶ್ ತಿಂದು ಜನ ಎಂಜಾಯ್ ಮಾಡಿದ್ರು.
Advertisement
Advertisement
ಮಣಿಪಾಲದ ವಿದ್ಯಾರ್ಥಿಗಳಾದ ನಾಬು ಬೀಚ್ ಗೆಂದು ಬಂದಿದ್ದೆವು. ಈ ವೇಳೆ ಇಲ್ಲಿ ವೈನ್ ಮೇಳ ನಡೆಯುತ್ತಿರುವುದು ತಿಳಿದಬಂತು. ಹೀಗಾಗಿ ಇಲ್ಲಿಗೆ ಬಂದು ವೈನ್ ರುಚಿ ಸವಿದೆವು ಅಂತ ವಿದ್ಯಾರ್ಥಿನಿ ಸುಶ್ಮಿತಾ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಬೆಂಗಳೂರಿನ ಸಂಸ್ಥೆ ಈ ದ್ರಾಕ್ಷಾ ರಸಗಳ ಅನಾವರಣ ಮಾಡಿತ್ತು. 200 ವಿಧದ ವೈನ್‍ಗಳನ್ನು ಜನ ಖರೀದಿಸಿದರು. ವೈನ್ ಪ್ರಿಯರಂತೂ ಲೈಟಾಗಿ ನಶೆ ಏರಿಸುತ್ತಾ ಎಂಜಾಯ್ ಮಾಡಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv