ಮಂಗಳೂರು: ವೈನ್ ಅಂದಾಕ್ಷಣ ಕೆಲವರಿಗೆ ಇಷ್ಟವಾಗುತ್ತದೆ. ಸ್ಲೋ ಆಗಿ ಮತ್ತೇರಿಸೋ ಸಿಹಿ ಮದ್ಯವನ್ನು ಕೆಲವು ಮಹಿಳೆಯರೂ ಇಷ್ಟಪಡುತ್ತಾರೆ. ಅಂತಹವರಿಗೆಲ್ಲಾ ನಗರದಲ್ಲಿ ವೈನ್ ಮೇಳವನ್ನು ಆಯೋಜಿಸಲಾಗಿತ್ತು.
ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ವೈನ್ ಮೇಳವನ್ನು ಆಯೋಜಿಸಲಾಗಿದ್ದು, ಸಖತ್ ರೆಸ್ಪಾನ್ಸ್ ಸಿಕ್ಕಿದೆ. ವೈನ್ ಫೆಡರೇಶನ್, ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ವೈನ್ ಮೇಳವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.
Advertisement
Advertisement
ವೈನ್ ಮೇಳದ ಜೊತೆಗೆ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿತ್ತು. ದೇಶ- ವಿದೇಶದ ಖ್ಯಾತನಾಮರ ಸಂಗೀತ, ಕಾರ್ಯಕ್ರಮಮಕ್ಕೆ ಮತ್ತಷ್ಟು ಮತ್ತೇರಿಸಿತ್ತು. ಬ್ರಾಂಡೆಡ್ ವೈನ್ಗಳಿಗೆ ಡಿಸ್ಕೌಂಟ್ ಇದ್ದುದರಿಂದ ಗ್ರಾಹಕರು ಮುಗಿಬಿದ್ದು ವೈನ್ ಖರೀದಿಸಿದ್ದಾರೆ.