ಜಾಝ್ ಶೈಲಿಯಲ್ಲಿ ‘ಸರೆಂಡರ್’ ಮಾಡಲು ಬಂದ ‘ವಿಂಡೋಸೀಟ್’ ನಟಿಮಣಿಯರು

Public TV
2 Min Read
Sanjana Anand Amrita Iyengar WindowSet

ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಸಿನಿಮಾ ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು.

ರೋಮ್ಯಾಂಟಿಕ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ‘ವಿಂಡೋಸೀಟ್’ ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದಿರುವ ಈ ಚಿತ್ರ ಇದೀಗ ಚಿತ್ರದ ಹಾಡೊಂದನ್ನ ವಿಶೇಷ ಶೈಲಿಯಲ್ಲಿ ಚಿತ್ರೀಕರಿಸಿ ಎಲ್ಲರ ಚಿತ್ತ ಸೆಳೆದಿದೆ.

Sanjana Anand Amrita Iyengar WindowSet 1

ಚಿತ್ರದ ‘ಸರೆಂಡರ್’ ಹಾಡನ್ನು ಚಿತ್ರತಂಡ ವಿಭಿನ್ನವಾಗಿ, ವಿಶೇಷವಾಗಿ ಚಿತ್ರೀಕರಿಸಿ ಸುದ್ದಿಯಲ್ಲಿದೆ. ಜಾಝ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಹಾಡು ಕನ್ನಡದ ಮಟ್ಟಿಗಂತೂ ಇದೇ ಮೊದಲ ಪ್ರಯೋಗ. ಸರೆಂಡರ್ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದ್ದು, ಈ ಹಾಡು ಎಲ್ಲರ ಗಮನವನ್ನು ತನ್ನತ್ತ ಆಕರ್ಷಿಸಿದೆ. ಈ ಪ್ರಯೋಗಾತ್ಮಕ ಹಾಡಿಗೆ ಮಹೇಶ್ ರಘುನಂದನ್ ಸಾಹಿತ್ಯ, ಸೌಂದರ್ಯ ಜಯಚಂದ್ರನ್ ಗಾಯನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಮೋಡಿ ಇದೆ. ಇದನ್ನೂ ಓದಿ:  ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

Sanjana Anand Amrita Iyengar WindowSet 2

ಈಗಾಗಲೇ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಅದಕ್ಕೆಲ್ಲ ಬ್ರೇಕ್ ಹಾಕಿತ್ತು. ಆದ್ರೀಗ ಎಲ್ಲವೂ ಸುಧಾರಣೆಯ ಹಂತಕ್ಕೆ ಬಂದು ತಲುಪಿದ್ದು, ‘ವಿಂಡೋಸೀಟ್’ ಚಿತ್ರತಂಡ ಕೂಡ ಸಿನಿರಸಿಕರಿಗೆ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದೆ.

Sanjana Anand

ಮೇಕಿಂಗ್, ಟೀಸರ್, ಹಾಡುಗಳು ಸೃಷ್ಟಿಸಿರೋ ಬಝ್, ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ಅನ್ನೋ ಕ್ಯೂರಿಯಾಸಿಟಿ, ಆದಿ ಲಕ್ಷ್ಮೀ ಪುರಾಣ ನಂತರ ನಿರೂಪ್ ಭಂಡಾರಿ ಯಾವುದೇ ಸಿನಿಮಾಗಳು ತೆರೆ ಕಾಣದಿರುವುದು, ಈ ಎಲ್ಲವೂ ಪ್ರೇಕ್ಷಕ ಪ್ರಭುಗಳ ಮನಸ್ಸಲ್ಲಿ ‘ವೀಂಡೋಸೀಟ್’ ಚಿತ್ರದ ಮೇಲೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿವೆ.

Amrita Iyengar

ಕೆ ಎಸ್ ಕೆ ಶೋರೀಲ್ ಬ್ಯಾನರ್ ನಡಿ ನಿರ್ಮಾಣವಾದ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಾರಥ್ಯ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್, ರಿತ್ವಿಕ್ ಸಂಕಲನವಿದೆ. ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಒಳಗೊಂಡಂತೆ ಹಲವು ಕಲಾವಿದರು ‘ವಿಂಡೋಸೀಟ್’ ತಾರಾ ಬಳಗದಲ್ಲಿದ್ದಾರೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

Share This Article
Leave a Comment

Leave a Reply

Your email address will not be published. Required fields are marked *