ಬಳ್ಳಾರಿ: ರೈತರ ಜಮೀನಿನಲ್ಲಿ ಅಳವಡಿಸಿದ ವಿಂಡ್ ಫ್ಯಾನ್ (Wind Fan) ಹೊತ್ತಿ ಉರಿದ ಘಟನೆ (Fire Accident) ಸಂಡೂರು ತಾಲೂಕಿನ ಹಿರಾಳ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ವೀರೇಶ್, ಕುಮಾರಸ್ವಾಮಿ ಹಾಗೂ ರಾಮಾಂಜನೇಯ ಎನ್ನುವವರ ಜಮೀನಿನಲ್ಲಿ ಖಾಸಗಿ ಕಂಪನಿ ಅಳವಡಿಸಿದ್ದ ವಿಂಡ್ ಫ್ಯಾನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ವಿಂಡ್ ಫ್ಯಾನ್ ಹೊತ್ತಿ ಉರಿದಿದೆ.
Advertisement
Advertisement
ಬೆಂಕಿಯಿಂದಾಗಿ ಜಮೀನಿನಲ್ಲಿ ದಟ್ಟ ಹೊಗೆ ಆವರಿಸಿದೆ. ದಟ್ಟ ಹೊಗೆ ಕಂಡು ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಚೋರನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಈ ಸಂಬಂಧ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.