ರಾಮನಗರ: ಬೆಂಗಳೂರು ಲೋಕಸಭಾ ಚುನಾವಣೆ ಗರಿಗೆದರಿದ್ದು, ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ರಾಮನಗರಕ್ಕೆ (Ramanagara) ಆಗಮಿಸಿದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ (Dr Manjunath) ಇಂದು ಬಿಜೆಪಿ (BJP) ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ಯುದ್ಧದಲ್ಲಿ ಡಿಕೆ ಬ್ರದರ್ಸ್‌ಗೆ ಟಕ್ಕರ್ ಕೊಡಲು ಕಣಕ್ಕಿಳಿದಿರುವ ಮಂಜುನಾಥ್ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಗೆಲುವಿಗೆ ತಂತ್ರ ರೂಪಿಸಿದರು. ಇದೇ ವೇಳೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರ, ಸಲಹೆ ಮುಖ್ಯ. ಇಲ್ಲಿನ ಜನ ಎಷ್ಟು ಪ್ರೀತಿ ಮಾಡುತ್ತಾರೆ ಎಂದರೆ ನಾನು ಬಂದಾಗ ಪ್ರೀತಿಯ ಸಂಕೇತವಾದ ಗುಲಾಬಿ ಹೂ ನೀಡಿದರು. ಪ್ರಧಾನಿ ನರೇಂದ್ರ ಮೋದಿ (Narendra Modi) ನಿಸ್ವಾರ್ಥ ಸೇವೆ ಮೂಲಕ ಹೊಸ ಭಾರತ ಕಟ್ಟಲು ಮುಂದಾಗಿದ್ದಾರೆ. ಅವರ ಕೆಲಸಕ್ಕೆ ನಾವು ಕೈಜೋಡಿಸಬೇಕು ಎಂದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಒಂದು ಮತ ಜಾಸ್ತಿ ಪಡೆದರೂ ರಾಜೀನಾಮೆ ಕೊಡ್ತೀರಾ? – ಪ್ರದೀಪ್ ಈಶ್ವರ್‌ಗೆ ಸುಧಾಕರ್ ಮರು ಸವಾಲ್!
Advertisement
Advertisement
ನಾವು ಈ ಚುನಾವಣೆಯಲ್ಲಿ ಒಳ್ಳೆಯ ಈಜುಗಾರರಾಗಬೇಕು. ಆಗಲೇ ಸಮುದ್ರದಲ್ಲಿ ಮುತ್ತು ಸಿಗೋದು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದಶಪಥ ಹೆದ್ದಾರಿ, ರಸ್ತೆ, ರೈಲ್ವೆ, ವಿಮಾನ ಸೇವೆ ಅಭಿವೃದ್ಧಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಕೊಡುವ ಕೆಲಸ ಆಯಿತು. ದೇಶದ ಕೋವಿಡ್ ನಿಯಂತ್ರಣದ ಬಗ್ಗೆ ವಿಶ್ವಸಂಸ್ಥೆ ಕೂಡ ಹೊಗಳಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನನಗೆ ಪ್ರೇಮಿಗಳ ರೀತಿ ಕಾಣುತ್ತಿದ್ದಾರೆ. ನಾನು ಹೃದ್ರೋಗ ತಜ್ಞನಾಗಿ ಕೆಲಸ ಮಾಡಿದ್ದೇನೆ. ಬಡವರನ್ನು ಕಂಡರೆ ನನಗೆ ಬಹಳ ಪ್ರೀತಿ. ಈಗ ನಡೆಯುತ್ತಿರುವುದು ಧರ್ಮ ಯುದ್ದ. ಈ ಯುದ್ಧದಲ್ಲಿ ನಾವು ಜಯಶೀಲರಾಗಬೇಕು. ಈ ಯುದ್ಧದಲ್ಲಿ ಸತ್ಯಕ್ಕೆ ಜಯ ಸಿಗಬೇಕು. ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ – ಬಿಎಸ್‌ವೈ ವಿರುದ್ಧ ಗುಡುಗಿದ ಈಶ್ವರಪ್ಪ
Advertisement