Wimbledon Champion: ಸತತ 2ನೇ ಬಾರಿಗೆ ಅಲ್ಕರಾಜ್‌ಗೆ ವಿಂಬಲ್ಡನ್‌ ಕಿರೀಟ – ಜೊಕೊವಿಕ್‌ಗೆ ಮತ್ತೆ ಸೋಲು!

Public TV
1 Min Read
Carlos Alcaraz

ಲಂಡನ್: ಸತತ 10 ವರ್ಷಗಳ ಕಾಲ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ಗೆ ?(Novak Djokovic) ಸತತ 2ನೇ ಬಾರಿಗೆ ಸೋಲಾಗಿದೆ. ಕಾರ್ಲೋಸ್‌ ಅಲ್ಕರಾಜ್‌ (Carlos Alcaraz) ಮತ್ತೆ ಚಾಂಪಿಯನ್‌ ಆಗಿದ್ದಾರೆ.

ಭಾನುವಾರ ಲಂಡನ್‌ನ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಸತತ 2ನೇ ಬಾರಿಗೆ ವಿಂಬಲ್ಟನ್‌ ಕಿರೀಟ (Wimbledon Crown) ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟರ್‌ಗೆ ಬಿಸಿಸಿಐನಿಂದ 1 ಕೋಟಿ ಆರ್ಥಿಕ ನೆರವು!

Carlos Alcaraz 2

ಕಳೆದ ವರ್ಷ ಸಹ ಅಲ್ಕರಾಜ್‌, ನೊವಾಕ್ ಜೊಕೊವಿಕ್‌ ಅವರನ್ನೇ ಮಣಿಸಿ ಚೊಚ್ಚಲ ವಿಂಬಲ್ಡನ್‌ ಕಿರೀಟಕ್ಕೆ ಮುತ್ತಿಟ್ಟಿದ್ದರು. ಈ ಬಾರಿಯೂ ಜೊಕೊವಿಕ್‌ ಅವರನ್ನೇ ಸೋಲಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು ವಿಶೇಷ. 6-2, 6-2, 7-6 (7/4) ಸೆಟ್‌ಗಳಲ್ಲಿ ಮಣಿಸುವ ಮೂಲಕ ಚಾಂಪಿಯನ್‌ ಪಟ್ಟವನ್ನು ತಮ್ಮ ಹೆಸರಿನಲ್ಲೇ ಅಲ್ಕರಾಜ್‌ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೊಕ್​!

Carlos Alcaraz 3

ಮೊದಲ ಎರಡು ಸುತ್ತಿನಲ್ಲಿ ಹಿಡಿತ ಸಾಧಿಸಿದ್ದ ಅಲ್ಕರಾಜ್‌ 6-2, 6-2 ಸೆಟ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡರು. ಕೊನೆಯ ಸುತ್ತಿನಲ್ಲಿ ತೀವ್ರ ಪೈಪೋಟಿ ಹೊರತಾಗಿಯೂ 7-6 ಸೆಟ್‌ನಲ್ಲಿ ಜೊಕೊವಿಕ್‌ ಅವರನ್ನ ಸೋಲಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಸಂಜು ಅಮೋಘ ಫಿಫ್ಟಿ, ಶಿವಂ ದುಬೆ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ; 4-1ರಲ್ಲಿ ಸರಣಿ ಗೆದ್ದ ಭಾರತ!

3ನೇ ಗ್ರ್ಯಾಂಡ್‌ಸ್ಲಾಮ್‌ ಕಿರೀಟ:
ಇದು ಅಲ್ಕರಾಜ್‌ ಗೆದ್ದ 3ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಟ್ರೋಫಿಯೂ (Grand Slam Crown) ಸಹ ಆಗಿದೆ. 2022ರ ಯುಎಸ್‌ ಓಪನ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಕಿರೀಟ ಜಯಿಸಿದ್ದರು. ಬಳಿಕ 2023ರಲ್ಲಿ ಆಲ್ ಇಂಗ್ಲೆಂಡ್ ಟೆನ್ನಿಸ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಜೊಕೊವಿಕ್‌ ವಿರುದ್ಧ 2ನೇ ಗ್ರ್ಯಾಂಡ್‌ಸ್ಲ್ಯಾಮ್‌ ಕಿರೀಟ ಗೆದ್ದುಕೊಂಡಿದ್ದರು.

Share This Article