ಆಸ್ಕರ್ ಪ್ರಶಸ್ತಿ ವಿಜೇತ ನಟ ವಿಲಿಯಂ ಹರ್ಟ್ ಇನ್ನಿಲ್ಲ

Public TV
1 Min Read
oscar winner

ನ್ಯೂಯಾರ್ಕ್: ಹಾಲಿವುಡ್ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ವಿಲಿಯಂ ಹರ್ಟ್ ಅಕಾ ಜನರಲ್ ಥಡ್ಡಿಯಸ್ ರಾಸ್ (71) ಭಾನುವಾರ ನಿಧನರಾಗಿದ್ದಾರೆ. ನೆನ್ನೆಯಷ್ಟೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಅವರು, ಕುಟುಂಬದೊಂದಿಗೆ ಸಂಭ್ರಮಸಿದ್ದರು. ಅವರ 72ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಾರದ ಲೋಕಕ್ಕೆ ಹೋಗಿದ್ದಾರೆ ವಿಲಿಯಂ. ತಂದೆಯ ಅಗಲಿಕೆಯನ್ನು ಪುತ್ರ ವಿಲ್ ಭಾನುವಾರ ಸಾಮಾಜಿಕ ಜಾಲತಾಣ ಮೂಲಕ ಖಚಿತಪಡಿಸಿದ್ದಾರೆ. ನಾಲ್ಕು ಜನ ಮಕ್ಕಳು ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ ವಿಲಿಯಂ. ಅಂತಿಮ ವಿಧಾನದ ಕುರಿತು ಕುಟುಂಬ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

ನೆಚ್ಚಿನ ನಟನ ಅಗಲಿಕೆಯ ನೋವನ್ನು ಹಾಲಿವುಡ್ ಅವರ ಸಿನಿಮಾಗಳನ್ನು ನೆನಪಿಸಿಕೊಳ್ಳುವ ಮೂಲಕ ಕಂಬನಿ ಮಿಡಿದಿದೆ. ಅಲ್ಲದೇ, ಆಸ್ಕರ್ ಪ್ರಶಸ್ತಿ ವಿಜೇತ ನಟನ ವ್ಯಕ್ತಿತ್ವದ ಬಗ್ಗೆ ಹಾಲಿವುಡ್ ಕೊಂಡಾಡಿದೆ. ವಿಲಿಯಂ 1980ರಲ್ಲಿ ನಟಿಸಿದ್ದ ಚಿತ್ರ, ವೈಜ್ಞಾನಿಕ ಕಾಲ್ಪನಿಕ ಥ್ರಿಲ್ಲರ್ ಆಲ್ಟರ್ಡ್ ಸ್ಟೇಟ್ಸ್‍ನಲ್ಲಿ ವಿಜ್ಞಾನಿಯಾಗಿ ನಟಿಸಿದ್ದರು. ಇದಕ್ಕಾಗಿ ಅವರು ವರ್ಷದ ಹೊಸ ತಾರೆಗಾಗಿ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವನ್ನು ಪಡೆದಿದ್ದರು. 2008 ರ `ದಿ ಇನ್‍ಕ್ರೆಡಿಬಲ್ ಹಲ್ಕ್` ನಲ್ಲಿ ಅವರು ಜನರಲ್ ಥಡ್ಡಿಯಸ್ ರಾಸ್ ಅವರ ಪಾತ್ರದ ಮೂಲಕ ಅವರು ಯುವ ಪೀಳಿಗೆಯ ಚಲನಚಿತ್ರ ಪ್ರೇಮಿಗಳಿಗೆ ಚಿರಪರಿಚಿತರಾದರು. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

ನಂತರ ಅವರು `ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್`, `ಅವೆಂಜರ್ಸ್: ಇನ್ಫಿನಿಟಿ ವಾರ್`, `ಅವೆಂಜರ್ಸ್: ಎಂಡ್‍ಗೇಮ್` ಮತ್ತು `ಬ್ಲ್ಯಾಕ್ ವಿಡೋ` ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *