ಮುಂಬೈ: ನೀವು ನಿಮ್ಮ ಸ್ನೇಹಿತರ ಮನೆಗೆ ರಕ್ತದ ಸ್ಯಾನಿಟರಿ ಪ್ಯಾಡ್ ತೆಗೆದುಕೊಂಡು ಹೋಗ್ತೀರಾ? ಇಲ್ಲ ಅಲ್ಲವೇ ಹಾಗೆಯೇ ಅಪವಿತ್ರಗೊಳಿಸುವ ಹಕ್ಕು ನಮಗಿಲ್ಲ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದು ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆ ಪ್ರವೇಶಿಸುವುದನ್ನು ಖಂಡಿಸಿದ್ದಾರೆ.
ಪ್ರತಿಯೊಬ್ಬರಿಗೂ ಪ್ರಾರ್ಥಿಸುವ ಹಕ್ಕಿದೆ ಎಂಬುದನ್ನು ನಾನು ನಂಬಿದ್ದು, ಆದ್ರೆ ಅಪವಿತ್ರಗೊಳಿಸುವ ಹಕ್ಕು ನಮಗಿಲ್ಲ. ಇಂದು ಸುಪ್ರೀಂ ಕೋರ್ಟ್ ತೀರ್ಪಿನ ಮಾತನಾಡುವ ಹಾಗಿಲ್ಲ. ಕೇಂದ್ರ ಸರ್ಕಾರ ಸಚಿವೆಯಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಸ್ಯಾನಿಟರಿ ಪ್ಯಾಡ್ ಜೊತೆ ಬೇರೆಯವರ ಮನೆಗೆ ಹೋಗಲ್ಲ ಅಂತಾದ್ರೆ ದೇವರ ಕೋಣೆಗೆ ಹೋಗಲ್ಲ. ನೀವು ದೇವರಿಗೆ ಗೌರವ ನೀಡುತ್ತಿದ್ದರೆ ದೂರದಿಂದಲೇ ನಮಸ್ಕರಿಸಿ ಹಿಂದಿರುಗಿ ಬರಬಹುದು ಅಂತಾ ಹೇಳಿದ್ರು.
Advertisement
Advertisement
ಇದೇ ವೇಳೆ ಮಾತನಾಡಿದ ಸ್ಮೃತಿ ಇರಾನಿ, ನಾನು ಮೊದಲ ಮಗುವಿಗೆ ಜನ್ಮ ನೀಡಿದ್ದಾಗ, ಮುಂಬೈನ ಅಂಧೇರಿಯಲ್ಲಿಯ ಪಾರ್ಸಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಹೋಗಿದ್ದೆ. ಆದ್ರೆ ನಾನು ಮಗುವನ್ನು ಪತಿಯಲ್ಲಿ ಕೊಟ್ಟು ಕಳುಹಿಸಿ ದೂರದಿಂದಲೇ ನಮಸ್ಕರಿಸಿದೆ. ಆದ್ರೆ ಪತಿ ದೇವಾಲಯದ ಗೇಟ್‍ನಿಂದ ದೂರ ಹೋಗು ಅಂದ್ರು. ನಾನು ಕಾರಿನಲ್ಲಿ ಹೋಗಿ ಕುಳಿತೆ. ನಾನು ಹಿಂದೂ, ಪಾರ್ಸಿ ವ್ಯಕ್ತಿಯನ್ನು ಮದುವೆ ಆಗಿದ್ದೇನೆ. ಆದ್ರೆ ಪಾರ್ಸಿ ಧರ್ಮವಲ್ಲದ ಮಹಿಳೆ ಆ ದೇವಸ್ಥಾನಕ್ಕೆ ಪ್ರವೇಶಿಸಬಾರದು ಎಂಬ ನಂಬಿಕೆ ಇದೆ. ಅದನ್ನು ನಾನು ನಂಬುತ್ತೇನೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.
Advertisement
ಪ್ರತಿಯೊಬ್ಬರಿಗೂ ಪ್ರಾರ್ಥಿಸುವ ಹಕ್ಕಿದೆ ಎಂಬುದನ್ನು ನಾನು ನಂಬಿದ್ದು, ಆದ್ರೆ ಅಪವಿತ್ರಗೊಳಿಸುವ ಹಕ್ಕು ನಮಗಿಲ್ಲ. ಇಂದು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡುವ ಹಾಗಿಲ್ಲ. ಕೇಂದ್ರ ಸರ್ಕಾರ ಸಚಿವೆಯಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ ಅಂತ ತಿಳಿಸಿದರು.
Advertisement
ಸ್ಯಾನಿಟರಿ ಪ್ಯಾಡ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಮ್ರತಿ ಇರಾನಿ ಟ್ವಟ್ಟರ್ ನಲ್ಲಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಝೋರೋಸ್ಟ್ರೈನ್ ಧರ್ಮವನ್ನು ನಂಬುತ್ತೇನೆ ಮತ್ತು ಗೌರವಿಸುತ್ತೇನೆ. ದೇವಾಲಯ ಪ್ರವೇಶಿಸುವುದು ಅಥವಾ ಬಿಡುವುದು ನನ್ನ ವೈಯಕ್ತಿಕ ನಂಬಿಕೆ ಅಂತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Since many people are talking about my comments — let me comment on my comment.
As a practising Hindu married to a practising Zoroastrian I am not allowed to enter a fire temple to pray.
— Smriti Z Irani (@smritiirani) October 23, 2018
These are 2 factual statements. Rest of the propaganda / agenda being launched using me as bait is well just that … bait.
— Smriti Z Irani (@smritiirani) October 23, 2018
As far as those who jump the gun regarding women visiting friend’s place with a sanitary napkin dipped in menstrual blood — I am yet to find a person who ‘takes’ a blood soaked napkin to ‘offer’ to any one let alone a friend.
— Smriti Z Irani (@smritiirani) October 23, 2018