ವಿಜಯಪುರ: ನಾನು ಶಿವಾಜಿಯ ವಂಶಸ್ಥ, ರಾಣಾ ಪ್ರತಾಪರ ವಂಶಸ್ಥ, ನಾನು ಸಾರ್ವಕರ್ ವಂಶಸ್ಥ ನನ್ನನ್ನ ಜೈಲಿಗೆ ಹಾಕ್ತೀರಾ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಸಚಿವ ಎಂ.ಬಿ ಪಾಟೀಲ್ (MB Patil) ಅವರನ್ನ ಪ್ರಶ್ನಿಸಿದ್ದಾರೆ.
ಎಂ.ಬಿ ಪಾಟೀಲ್ ಮತಕ್ಷೇತ್ರ ಬಬಲೇಶ್ವರದಲ್ಲಿ ನಡೆದ ಗೋ ಸಮಾವೇಶದಲ್ಲಿ ಸ್ವಕ್ಷೇತ್ರದ ಶಾಸಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೋಲಿಗೆ ಗ್ಯಾರಂಟಿ ಅಲ್ಲ, ನೀವೇ ಕಾರಣ – ಬಿಜೆಪಿ ನಾಯಕರ ವಿರುದ್ಧ ಸಿಡಿದ ಕಾರ್ಯಕರ್ತರು
ನೀವು ಆಯ್ಕೆ ಮಾಡಿರುವ ಶಾಸಕರು ಹೇಳ್ತಾರೆ, ಚಕ್ರವರ್ತಿ ಬಾಲ ಬಿಚ್ಚಿದ್ರೆ ಜೈಲಿಗೆ ಹಾಕ್ತೀವಿ ಅಂತ. ಅಯ್ಯೋ ಪುಣಾತ್ಮ ನಾನು ಶಿವಾಜಿಯ ವಂಶಸ್ಥ, ನಾನು ರಾಣಾ ಪ್ರತಾಪರ ವಂಶಸ್ಥ, ನಾನು ಸಾವರ್ಕರ್ (VD Savarkar) ವಂಶಸ್ಥ. ಭಗತಸಿಂಗ್ ಹೆಸರು ಹೇಳಿಕೊಂಡು ಬಂದವನು ನಾನು. ನನ್ನನ್ನ ಜೈಲಿಗೆ ಹಾಕ್ತಿರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ- ಚಂದನವನಕ್ಕೆ ಕಾಲಿಟ್ಟ ಅಳಿಯನಿಗೆ ಸುದೀಪ್ ಕಿವಿಮಾತು
ಈ ಹಿಂದೆ ಪಠ್ಯ ಪುಸ್ತಕದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ. ಹಿಜಬ್, ಆಜಾನ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಕೆಲಸ ಮಾಡಿದರೆ ಸೂಲಿಬೆಲೆಯನ್ನ ಜೈಲಿಗೆ ಕಳುಹಿಸಲಾಗುವುದು ಎಂದು ಸಚಿವ ಎಂಬಿಪಿ ಎಚ್ಚರಿಕೆ ನೀಡಿದ್ದರು. ಆಗ ನಟ ರಾಜ್ಯಸಭಾ ಸದಸ್ಯ ಜಗ್ಗೇಶ್ ಸೂಲಿಬೆಲೆ ಪರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದರು. ಇದೀಗ ಎಂ.ಬಿ ಪಾಟೀಲ್ ಕ್ಷೇತ್ರದಲ್ಲೇ ಕಾರ್ಯಕ್ರಮ ಮಾಡಿ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.