ಚಿತ್ರದುರ್ಗ: ರಾಜಕೀಯ ಪ್ರವೇಶ ಮಾಡ್ತೀರಾ ಎಂಬ ಪ್ರಶ್ನೆಗೆ ನಟ ಯಶ್ ಉತ್ತರಿಸಿದ್ದು, ಇದಕ್ಕೆಲ್ಲಾ ಮುಂಚೆಯೇ ಉತ್ತರ ಕೊಟ್ಟಿದ್ದೇನೆ. ರೈತರ ಪರವಾಗಿರೋದು ನನ್ನ ಕಾಳಜಿ. ರಾಜಕೀಯ ಪ್ರವೇಶದ ಉದ್ದೇಶವಲ್ಲ ಎಂದಿದ್ದಾರೆ.
ಮರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿರುವ ರೈತ ಸಂಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಗಳೊಂದಿಗೆ ಮಾತನಾಡಿದ ಯಶ್, ಚದುರಿದ ರೈತ ಸಂಘಟನೆಗಳು ಒಂದಾಗಬೇಕಿದೆ. ಇಂಥ ಬರದ ಸ್ಥಿತಿಯಲ್ಲಿ ಸರ್ಕಾರ ಸಾಲ ಮನ್ನಾ ಮಾಡಬೇಕು. ಒಬ್ಬರ ಮೇಲೆ ಒಬ್ಬರು ಬೆರಳು ತೋರಿಸೋದು ಸರಿಯಲ್ಲ. ಇನ್ನುಮುಂದೆ ರೈತರು ಸಾಲ ಮನ್ನಾ ಕೇಳದಂತೆ ವ್ಯವಸ್ಥೆ ಕಲ್ಪಿಸಬೇಕಿದೆ ಅಂದ್ರು.
ಕೆರೆಗಳ ಹೂಳೆತ್ತಿ ಮಳೆಗಾಲದ ಹೊತ್ತಿಗೆ ಸಿದ್ಧಪಡಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಲಿ. ಭದ್ರಾ ಕಾಮಗಾರಿ ಇಷ್ಟು ವರ್ಷಗಳ ಕಾಲ ವಿಳಂಬವಾಗಿದ್ದು ದುರದೃಷ್ಕರ ಅಂತಾ ಯಶ್ ಬೇಸರ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ ಜಲ
ಇದನ್ನೂ ಓದಿ: ಕೊಪ್ಪಳ: ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ನಟ ಯಶ್ ಸನ್ಮಾನ