ವರಮಹಾಲಕ್ಷ್ಮಿ ಹಬ್ಬದಂದು (ಆ.16) ಹೊಂಬಾಳೆ ಸಂಸ್ಥೆ ಮುಡಿಗೆ 4 ರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿದೆ. ಈ ಖುಷಿಯ ಸಂದರ್ಭದಲ್ಲಿ ಯಶ್ (Yash) ಮತ್ತು ರಿಷಬ್ ಶೆಟ್ಟಿ (Rishab Shetty) ಜೊತೆಯಾಗಿ ನಟಿಸುವ ಕುರಿತು ಪಬ್ಲಿಕ್ ಟಿವಿಗೆ ನಿರ್ಮಾಪಕ ವಿಜಯ್ ಕಿರಗಂದೂರ್ (Vijay Kirgandur) ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಅವರಿಬ್ಬರೂ ಓಕೆ ಅಂದರೆ ನಾನು ನಿರ್ಮಾಣ ಮಾಡಲು ಸಿದ್ಧ ಎಂದಿದ್ದಾರೆ.
ಮೊದಲಿಗೆ ಕನ್ನಡ ನಾಡಿನ ಜನತೆಗೆ ಧನ್ಯವಾದಗಳು. ರಾಷ್ಟ್ರ ಪ್ರಶಸ್ತಿ ಕರುನಾಡಿನ ಜನತೆಗೆ ಸೇರಬೇಕಾಗಿದೆ. ‘ಕಾಂತಾರ’ ಹೊಂಬಾಳೆ ಸಂಸ್ಥೆಯಲ್ಲಿ ಮೂಡಿ ಬಂದಿರುವ ಸಿನಿಮಾ. ಈ 4 ಪ್ರಶಸ್ತಿ ಬಂದಿರೋದ್ದಕ್ಕೆ ನಮಗೆ ತುಂಬಾ ಖುಷಿ ಆಗಿದೆ. ‘ಕೆಜಿಎಫ್’, ‘ಕಾಂತಾರ’ ಚಿತ್ರಗಳು ಎರಡರಲ್ಲೂ ತುಂಬಾ ಎಫರ್ಟ್ ಇತ್ತು. ವರಮಹಾಲಕ್ಷ್ಮಿ ಹಬ್ಬದ ದಿನ ಈ ಪ್ರಶಸ್ತಿ ಬಂದಿದೆ. ಮುಂದೆ ಇನ್ನೂ ಒಳ್ಳೆಯ ಸಿನಿಮಾ ಕೊಡ್ತೀವಿ ಎಂದು ವಿಜಯ್ ಕಿರಗಂದೂರ್ ಮಾತನಾಡಿದ್ದಾರೆ.
ಈಗ ಪ್ರಶಸ್ತಿ ಬಂದ್ಮೇಲೆ ನಮಗೆ ಮತ್ತೆ ಜವಾಬ್ದಾರಿ ಹೆಚ್ಚಾಗಿದೆ. ‘ಕಾಂತಾರ’ ಲಾಸ್ಟ್ 20 ನಿಮಿಷ ರಿಷಬ್ ಶೆಟ್ಟಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ‘ಕಾಂತಾರ’ ಸಿನಿಮಾ ಪೂರ್ತಿ ಎಡಿಟ್ ಆದ್ಮೇಲೆ ನಮಗೆ ಆ ವೈಬ್ರೇಶನ್ ಗೊತ್ತಾಗಿದ್ದು, ಕಾಂತಾರ ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಜಾಸ್ತಿ ನಿರೀಕ್ಷೆ ಮಾಡಬಹುದು ಎಂದಿದ್ದಾರೆ ವಿಜಯ್. ‘ಕೆಜಿಎಫ್ 2′ ಸಿನಿಮಾ ಯಶ್ ಮತ್ತು ಪ್ರಶಾಂತ್ ನೀಲ್ ಕನಸಾಗಿತ್ತು. ಈಗ ಅವರಿಬ್ಬರ ಪ್ರಯತ್ನಕ್ಕೆ ಗೆಲುವಾಗಿದೆ. ಯಶ್ ಮತ್ತು ಪ್ರಶಾಂತ್ ಸಿನಿಮಾ ಯಾವ ರೀತಿ ಮಾಡಬೇಕು ಅಂತ ತುಂಬಾ ಮಾತಾಡಿಕೊಳ್ತಿದ್ದರು. ಇಂದು ಅವರಿಂದಲೇ `ಕೆಜಿಎಫ್ 2’ ಚಿತ್ರಕ್ಕೆ ಯಶಸ್ಸು ಸಿಕ್ಕಿದೆ. ಇದೊಂದು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
ಯಶ್ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಚಿತ್ರ ನಿರ್ಮಾಣ ಮಾಡುತ್ತೀರಾ ಎಂದು ಕೇಳಾದ ಪ್ರಶ್ನೆಗೆ, ಇದು ನಟರಿಗೆ ಬಿಟ್ಟ ವಿಚಾರವಾಗಿದೆ. ಅವರಿಬ್ಬರು ಓಕೆ ಅಂದರೆ, ನಾನು ನಿರ್ಮಾಪಕನಾಗಿ ನಾನು ರೆಡಿ ಇದ್ದೇನೆ. ಅವರಿಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಮಾಡಿದ್ದರೆ ನಮಗೂ ಖುಷಿ ಎಂದು ಸಂತಸದಿಂದ ಎಂದು ಹೊಂಬಾಳೆ ಸಂಸ್ಥೆ ವಿಜಯ್ ಕಿರಗಂದೂರ್ ಮಾತನಾಡಿದ್ದಾರೆ.
ಈ ವೇಳೆ, ‘ಕೆಜಿಎಫ್ 3’ ಮುಂದಿನ ದಿನಗಳಲ್ಲಿ ಬರುತ್ತದೆ. ಮುಂಬರುವ ದಿನಗಳಲ್ಲಿ ಜನರಿಗೆ ಏನು ಬೇಕು, ಆ ತರಹದ ಚಿತ್ರಗಳನ್ನ ನಮ್ಮ ಬ್ಯಾನರ್‌ನಲ್ಲಿ ಬರುತ್ತವೆ. ಕನ್ನಡ ಸಿನಿಮಾದಲ್ಲಿ ನಾವು ಎಲ್ಲಾ ಟೆಕ್ನಾಲಜಿ ಬಳಕೆ ಮಾಡಿಕೊಂಡಿದ್ದೀವಿ. ಅಂತರಾಷ್ಟ್ರೀಯಮಟ್ಟದಲ್ಲಿ ಮತ್ತೆ ಕನ್ನಡ ಚಿತ್ರರಂಗ ಹೋಗುತ್ತದೆ.