ಪವಿತ್ರ ಕಡ್ತಲ
ಬೆಂಗಳೂರಿಗೆ: ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ಭಾರತಕ್ಕೆ ಹಸ್ತಾಂತರವಾದ ಬಳಿಕ ದೆಹಲಿಯ ಅರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಪ್ಯಾರಾಚೂಟ್‍ನಿಂದ ಬಿದ್ದ ಪರಿಣಾಮ ಅವರ ಪಕ್ಕೆಲುಬು ಮುರಿದಿದೆ ಎಂಬ ಮಾಹಿತಿ ಲಭಿಸಿದೆ.
ಭಾರತಕ್ಕೆ ಮರಳಿದ ಬಳಿಕ ಅಭಿನಂದನ್ ಅವರಿಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು, ಈ ವೇಳೆ ಅವರ ಬೆನ್ನುಹುರಿ ಹಾಗೂ ಮೆದುಳಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಪರಿಣಾಮ ಮತ್ತೆ ಅಭಿನಂದನ್ ಯುದ್ಧ ವಿಮಾನ ಹಾರಾಟ ನಡೆಸುವುದು ಖಚಿತವಾಗಿದೆ. ಒಂದೊಮ್ಮೆ ಅವರ ಬೆನ್ನುಹುರಿ, ಮೆದುಳಿಗೆ ಪೆಟ್ಟಾಗಿದ್ದರೆ, ಮತ್ತೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವುದು ಕಷ್ಟಸಾಧ್ಯವಾಗುತ್ತಿತ್ತು.
Advertisement
Advertisement
ವಿಂಗ್ ಕಮಾಂಡರ್ ಅಭಿನಂದನ್‍ರ ಪಕ್ಕೆಲುಬು ಮುರಿತವಾಗಿರುವ ಕಾರಣ ಅವರಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ. ಆ ಬಳಿಕ ಅವರು ದೈಹಿಕವಾಗಿ ಫಿಟ್ ಆದ ಆಗಿ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ. ದೆಹಲಿಯ ಆರ್ಮಿ ಆಸ್ಪತ್ರೆಯಿಂದ ಮಂಗಳವಾರ ಅಭಿನಂದನ್ ಅವರು ಬಿಡುಗಡೆ ಆಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
ಆಸ್ಪತ್ರೆಯಿಂದ ಬಂದ ಬಳಿಕ ಅಭಿನಂದನ್ ಅವರಿಗೆ ಸೇನಾ ಮುಖ್ಯ ಅಧಿಕಾರಿಗಳು ಡಿ ಬ್ರೀಫಿಂಗ್ ನಡೆಸುತ್ತಾರೆ. ಪಾಕ್ ವಿಮಾನವನದ ಮೇಲೆ ದಾಳಿ ನಡೆಸಿದ ಸಂದರ್ಭದಿಂದ ಬಿಡುಗಡೆಯಾಗವ ತನಕ ಸಂಭವಿಸಿದ ಘಟನೆಗಳ ಬಗ್ಗೆ ವಾಯುಪಡೆಯ ಅಧಿಕಾರಿಗಳು ಮಾಹಿತಿ ಪಡೆಯುತ್ತಾರೆ. ಅಭಿನಂದನ್ ಅವರು ಚೇತರಿಕೆಯಾದ ಬಳಿಕ ಕರ್ತವ್ಯಕ್ಕೆ ಹಾಜರಾಗಲು ಫಿಟ್ನೆಸ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
Advertisement
ಅಭಿನಂದನ್ ತಮ್ಮ ಫ್ಲೈಯಿಂಗ್ ಫಿಟ್ನೆಸ್ ಪ್ರಮಾಣ ಪತ್ರ ಪಡೆಯಲು ಬೆಂಗಳೂರಿಗೆ ಆಗಮಿಸಬೇಕಾಗಿದ್ದು, ಕೆಲವೇ ದಿನದಲ್ಲಿ ಬೆಂಗಳೂರಿಗೆ ಬಂದು ಹೆಚ್‍ಎಎಲ್ ನಲ್ಲಿರುವ ಇನ್ಸಿಟ್ಯೂಟ್ ಆಫ್ ಏರೋಸ್ಪೇಸ್ ನಲ್ಲಿ ಅಭಿನಂದನ್ ಫ್ಲೈಯಿಂಗ್ ಫಿಟ್ನೆಸ್ ಪ್ರಮಾಣ ಪತ್ರ ಪಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv