ಐರಾವತ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ರಿಷಬ್ ಪಂತ್‌ನ ಬಿಟ್ಟು, ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರನ್ನು ನಟಿ ಭೇಟಿ ಮಾಡಿದ್ದಾರೆ. ಈ ಕುರಿತ ಫೋಟೋ ಶೇರ್ ಮಾಡಿ, `ಕಾಂತಾರ 2′ (Kantara 2) ಎಂದು ಉಲ್ಲೇಖಿಸಿದ್ದಾರೆ.

View this post on Instagram
`ಕಾಂತಾರ’ ನಿರ್ದೇಶಕ ರಿಷಬ್ ಶೆಟ್ಟಿ ಜೊತೆ ಊರ್ವಶಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಊರ್ವಶಿ ಹಳದಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಬಿಳಿ ಬಣ್ಣದ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಫೋಟೋ ಶೇರ್ ಮಾಡಿ, `ಕಾಂತಾರಾ-2′ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ (Hombale Films) ಲೋಡಿಂಗ್’ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕೂಡ ʻಕಾಂತಾರʼ ಸಿನಿಮಾ ನೋಡಿದೆ: ಅಮಿತ್ ಶಾ
ಊರ್ವಶಿ ಈ ಪೋಸ್ಟ್ಗೆ ನೆಟ್ಟಿಗರು ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. ಪಂತ್ ಹೆಸರು ಹೇಳಿ ಕಾಲೆಳೆದಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಓಯ್ ಅಕ್ಕ.. ನಿಮ್ಮ ಲೈಫ್‌ನಲ್ಲಿ ಎಷ್ಟೆಲ್ಲಾ ರಿಷಬ್ ಇದ್ದಾರೆ? ಎಂದು ಕೇಳುತ್ತಿದ್ದಾರೆ. ಇಬ್ಬರ ಫೋಟೋ ವೈರಲ್ ಆಗಿದ್ದು ಭೇಟಿಯ ಕಾರಣ ಬಹಿರಂಗವಾಗಿಲ್ಲ. ಊರ್ವಶಿ ರೌಟೇಲಾ `ಕಾಂತಾರ’ ಪ್ರೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k


