ಕೀವ್: ಕಳೆದ 3 ವರ್ಷಗಳಿಂದ ರಷ್ಯಾ (Russia) ಜೊತೆಗೆ ಉಕ್ರೇನ್ (Ukraine) ಯುದ್ಧದಲ್ಲಿ ತೊಡಗಿಕೊಂಡಿದೆ. ಹೀಗಾಗಿ ತನ್ನ ಸೇನೆಯ ಖರ್ಚು ಸೇರಿ ಯುದ್ಧದ ವೆಚ್ಚ ಭರಿಸಲು ನೀಲಿ ಚಿತ್ರಕ್ಕೆ (Blue Film) ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ತನ್ನ ದೇಶದಲ್ಲಿ ನೀಲಿ ಚಿತ್ರ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದ್ದು, ಈ ಹಿನ್ನೆಲೆ ಕಾನೂನು ತಿದ್ದುಪಡಿ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.ಇದನ್ನೂ ಓದಿ: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್
ಒಂದು ವೇಳೆ ನೀಲಿ ಚಿತ್ರಕ್ಕೆ ಕಾನೂನು ಮಾನ್ಯತೆ ಸಿಕ್ಕರೆ, ಇದರಿಂದ ಬರುವ ಆದಾಯವನ್ನು ಸೇನೆಯ ಖರ್ಚು, ವೆಚ್ಚವನ್ನು ನೋಡಿಕೊಳ್ಳಲು ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷ ಈ ಕಾನೂನಿನಡಿ 1,400 ಕೇಸುಗಳು ದಾಖಲಾಗಿದ್ದವು.
ಆದರೆ ದೇಶದಲ್ಲಿ ಈ ಕಾನೂನು ಜಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾನೂನು ಮಾನ್ಯತೆ ಸಿಕ್ಕಲ್ಲಿ ಉಕ್ರೇನ್‌ಗೆ ವಾರ್ಷಿಕ ನೂರಾರು ಕೋಟಿ ರೂ. ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತದಿಂದ 24,000 ಮಾನವ ಬಳಕೆ ಡ್ರೋನ್‌ಗಳನ್ನು ಖರೀದಿಸಬಹುದಾಗಿದೆ ಎಂದು ವರದಿಗಳು ತಿಳಿಸಿದೆ.ಇದನ್ನೂ ಓದಿ: ಹೊಸಪೇಟೆ | ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಭಾರೀ ಬೆಂಕಿ