– ಮಹಾರಾಷ್ಟ್ರ ಮಾಜಿ ಸಿಎಂ ಹೇಳಿಕೆಗೆ ಬಿಜೆಪಿ ವಿರೋಧ
ಮುಂಬೈ: ವೆನಿಜುವೆಲಾದಲ್ಲಿ (Venezuela) ಆದ ಘಟನೆ ಭಾರತದಲ್ಲೂ ಸಂಭವಿಸುತ್ತಾ? ನಿಕೋಲಸ್ ಮಡುರೋನಾ ಕಿಡ್ನಾಪ್ ಮಾಡಿದಂತೆ ಪ್ರಧಾನಿ ಮೋದಿಯನ್ನೂ (PM Modi) ಟ್ರಂಪ್ (Donald Trump) ಕಿಡ್ನಾಪ್ ಮಾಡ್ತಾರಾ? ಅಂತ ಮಹಾರಾಷ್ಟ್ರದ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚೌಹಾಣ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಭಾರತದಲ್ಲೂ ಮುಂದೊಂದು ದಿನ ವೆನಿಜುವೆಲಾ ಸ್ಥಿತಿ ಬರಬಹುದು ಅಂತ ಪೃಥ್ವಿರಾಜ್ ಚೌಹಾಣ್ (Prithviraj Chavan) ವ್ಯಾಖ್ಯಾನಿಸಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಗರು ಕೌಂಟರ್ ಕೊಟ್ಟಿದ್ದಾರೆ. ಇದು ಇಡೀ ದೇಶಕ್ಕೇ ಮಾಡಿದ ಅವಮಾನ. ಸಿಎಂ ಆಗಿದ್ದವರ ಮನಸ್ಥಿತಿ ಹೇಗಿದೆ ನೋಡಿ. ಅವರ ಮೆದುಳು ಸತ್ತೋಗಿದೆ, ಅನಕ್ಷರಸ್ಥ, ಮೂರ್ಖ ಅಂದಿದ್ದಾರೆ. ಇದನ್ನೂ ಓದಿ: ಮೋದಿ, ಶಾ ಸಮಾಧಿ ಅಗೆಯುತ್ತೇವೆ – ಜೆಎನ್‌ಯುವಿನಲ್ಲಿ ವಿವಾದಾತ್ಮಕ ಘೋಷಣೆ
ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳನ್ನು ವೆನೆಜುವೆಲಾದ ಅಧ್ಯಕ್ಷ ನಿರಾಕರಿಸಿದ್ದಾರೆ. ನನ್ನನ್ನು ನನ್ನ ದೇಶದಲ್ಲೇ ಅಪಹರಿಸಲಾಗಿದೆ. ನಾನು ಸಭ್ಯ ವ್ಯಕ್ತಿ, ನಾನು ವೆನೆಜುವೆಲಾದ ಅಧ್ಯಕ್ಷ, ಇನ್ನೂ ಆ ಹುದ್ದೆಯಲ್ಲಿರುವುದಾಗಿ ಹೇಳಿಕೊಂಡಿರುವ ಮಡುರೊ, ಅಮೆರಿಕಾದ ಫೆಡರಲ್ ನ್ಯಾಯಾಲಯದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ ನಾನು ನಿರ್ದೋಷಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ನಾನು ಅಪರಾಧಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ವಿಚಾರಣೆಗೆ ಹಾಜರಾಗಿದ್ದ ಮಡುರೊ ಅವರ ಪತ್ನಿ ಸಿಲಿಯಾ ಫ್ಲೋರ್ಸ್, ನಾನು ವೆನೆಜುವೆಲಾದ ಪ್ರಥಮ ಮಹಿಳೆ. ಪ್ರಕರಣದಲ್ಲಿ ನಾವು ಸಂಪೂರ್ಣವಾಗಿ ನಿರಪರಾಧಿ ಎಂದು ಮನವಿ ಮಾಡಿದ್ದಾರೆ. ಮುಂದಿನ ನ್ಯಾಯಾಲಯದ ವಿಚಾರಣೆ ಮಾರ್ಚ್ 17 ರಂದು ನಡೆಯಲಿದ್ದು, ನ್ಯಾಯಾಧೀಶರು ಮಡುರೊ ಅವರನ್ನು ಮತ್ತೆ ಹಾಜರಾಗಲು ಆದೇಶಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ SIR ಪ್ರಕಟ; 2.89 ಕೋಟಿ ಮತದಾರರ ಹೆಸರು ಡಿಲೀಟ್

