ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಆಹಾರಪ್ರಿಯರು. ರಾಜಧಾನಿಯಲ್ಲಿ ಕೆಫೆ ಸಂಸ್ಕೃತಿ ಹಾಸು ಹೊಕ್ಕಾಗಿದೆ. ಬೆಂಗಳೂರಿನ ಬಹುತೇಕ ಹೋಟೆಲ್ ಗಳು (Hotel) ಕೇವಲ ಕಾಫಿ ಕುಡಿಯುವ ಜಾಗಗಳಾಗಿ ಉಳಿಯದೇ, ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಇದರಿಂದಾಗಿ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಚಾರ್ಜ್ ಅಳವಡಿಕೆ ಬಗ್ಗೆ ಚರ್ಚೆ ನಡೆದಿದೆ.
ಇತ್ತೀಚೆಗೆ ಬೆಂಗಳೂರಿನ (Bengaluru) ಹೋಟೆಲ್‌ವೊಂದರ ಗೋಡೆಯ ಮೇಲೆ ಇಲ್ಲಿ ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ. ಒಂದು ವೇಳೆ 1 ಗಂಟೆಗಿಂತ ಹೆಚ್ಚು ಮೀಟಿಂಗ್ ನಡೆದರೆ ಪ್ರತಿ ಗಂಟೆಗೆ 1,000 ರೂ. ಶುಲ್ಕ ವಿಧಿಸಲಾಗುವುದು ಅಂತಾ ಬರೆಯಲಾಗಿತ್ತು. ಈ ನೋಟಿಸ್ ಒಂದರ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹೋಟೆಲ್‌ನಲ್ಲಿ ನಡೆಯೋ ಮೀಟಿಂಗ್ ಸಮಯದ ಬಗ್ಗೆ ಸಾಕಷ್ಟು ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಇದನ್ನೂ ಓದಿ: ಸ್ಪಿರಿಟ್ ಕುಡಿದು ಇಬ್ಬರು ಸಾವು, ಓರ್ವನ ಸ್ಥಿತಿ ಚಿಂತಾಜನಕ – ಇಬ್ಬರು ವಶಕ್ಕೆ
ನಗರದಲ್ಲಿ 5 ಸ್ಟಾರ್, 3 ಸ್ಟಾರ್ ಸಾಮಾನ್ಯ ಹೋಟೆಲ್‌ಗಳು ಸೇರಿದಂತೆ ಸುಮಾರು 35 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಸಣ್ಣ ಹಾಗೂ ಮಧ್ಯಮವರ್ಗದ ಹೋಟೆಲ್‌ಗಳು ಕೇವಲ ಊಟ-ಉಪಹಾರ ತಿನ್ನುವ ತಾಣಗಳಾಗದೇ ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಇಲ್ಲಿ ರಾಜಕೀಯ, ಭೂವ್ಯವಹಾರ, ರಿಯಲ್ ಎಸ್ಟೇಟ್, ಮದುವೆ, ಆಫೀಸ್ ವಿಷಯಗಳು ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತವೆ. ಈ ವೇಳೆ ಮಾತನಾಡುತ್ತಾ ಗ್ರಾಹಕರು ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇದರಿಂದ ನಂತರ ಬರುವ ಗ್ರಾಹಕರು ಹಾಗೂ ಹೋಟೆಲ್‌ನವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪೀಕ್ ಅವರ್‌ಗಳಲ್ಲಿ ಬರುವ ಗ್ರಾಹಕರಿಗೆ ಕೂರಲು ಜಾಗವಿಲ್ಲದೆ ಅವರು ವಾಪಸ್ ಹೋಗುತ್ತಾರೆ ಅಂತಿದ್ದಾರೆ ಹೋಟೆಲ್‌ನವರು. ಇದನ್ನೂ ಓದಿ: ಬಾಣಾವರ | ಮೂರು ಕಾರುಗಳ ನಡುವೆ ಸರಣಿ ಅಪಘಾತ – ಇಬ್ಬರ ಸಾವು, ಐವರಿಗೆ ಗಾಯ
ಈ ಬಗ್ಗೆ ಬೃಹತ್ ಬೆಂಗಳೂರು ಹೋಟೆಲ್ ಸಂಘಕ್ಕೆ (Hotel Association) ಹಲವು ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ. ಜೊತೆಗೆ 5 ಸ್ಟಾರ್ ಹೋಟೆಲ್ ಗಳ ಲಾಬಿಯಲ್ಲಿ ಕುಳಿತರೇ ಗಂಟೆಗೆ ಸಾವಿರ ರೂ. ಹಾಗೂ ತಿನ್ನಲು ಆರ್ಡರ್ ಮಾಡಬೇಕು. ಅದರಂತೆ ಬೆಂಗಳೂರಿನ ಎಲ್ಲಾ ಹೋಟೆಲ್ ಗಳಲ್ಲಿ ಪಾರ್ಕಿಂಗ್ ಚಾರ್ಜ್‌ನಂತೆ ಟೇಬಲ್ ಚಾರ್ಜ್ ಹಾಕಲು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ನಗರದ ಸಣ್ಣ, ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಟೀ, ಕಾಫಿ, ಉಪಹಾರ ಹಾಗೂ ಊಟಕ್ಕೆ ಇಂತಿಷ್ಟು ಸಮಯ ನಿಗದಿಪಡಿಸಿ ಟೇಬಲ್ ಚಾರ್ಜ್ ಅಳವಡಿಸುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಘ ತಿಳಿಸಿದೆ. ಇದನ್ನೂ ಓದಿ: ʻಕೈʼ ಮುಖಂಡನ ಪುತ್ರರಿಂದ ಪೊಲೀಸರ ಮೇಲೆ ಹಲ್ಲೆ ಕೇಸ್ – ಕಾನೂನು ಎಲ್ಲರಿಗೂ ಒಂದೇ, ಶಿಕ್ಷೆ ಆಗುತ್ತೆ: ನಾಗಲಕ್ಷ್ಮೀ ಚೌಧರಿ

