ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ (Kuruburu Shanthakumar) ನೇತೃತ್ವದಲ್ಲಿ ಜಲ ಸಂರಕ್ಷಣಾ ಸಮಿತಿಯಿಂದ (Water Conservation Committee) ಮಂಗಳವಾರ ಬಂದ್‌ಗೆ ಕರೆ ನೀಡಲಾಗಿದ್ದು, ಕನ್ನಡ ಪರ ಸಂಘಟನೆಗಳು (Pro-Kannada Organization) ಈ ವಿಚಾರವಾಗಿ ತಟಸ್ಥ ಧೋರಣೆ ತಾಳಿವೆ.
ಮಂಗಳವಾರ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಪ್ರವೀಣ್ ಶೆಟ್ಟಿ (Praveen Shetty) ಬಣ ಹೇಳಿದೆ. ಸದ್ಯಕ್ಕೆ ಕನ್ನಡ ಸಂಘಟನೆಗಳಿಂದ ಮಂಗಳವಾರ ಬಂದ್ ಬಗ್ಗೆ ಬೆಂಬಲವಿಲ್ಲ. ಬೇರೆ ದಿನಾಂಕದಂದು ಬಂದ್ ಘೋಷಣೆಯಾಗಬೇಕಿತ್ತು. ಮಂಗಳವಾರ ಕರೆ ನೀಡಿದ್ದು ಬಹಳ ಬೇಗ ಆಯ್ತು. ಎಲ್ಲರನ್ನೂ ಒಟ್ಟುಗೂಡಿಸಲು ಕಷ್ಟ ಆಗಬಹುದು ಎಂದು ಕನ್ನಡ ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ
Advertisement
Advertisement
ಈ ಕುರಿತು ಕರವೇ ನಾರಾಯಣಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಕರವೇ ಶಿವರಾಮೇಗೌಡ ಬಣ, ಸೇರಿ ಹಲವು ಕನ್ನಡಪರ ಸಂಘಟನೆಗಳಿಂದ ಬಂದ್ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಇದನ್ನೂ ಓದಿ: ಬಂದ್ ಮಾಡಿದರೆ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ – ಡಿಕೆಶಿ ಹೇಳಿಕೆಗೆ ಆಕ್ರೋಶ
Advertisement
Web Stories