ನವದೆಹಲಿ: ಪ್ರಂಪಚದ ಪ್ರಭಾವಶಾಲಿ ಕರೆನ್ಸಿ ಅಮೆರಿಕದ ಡಾಲರ್‌ಗೆ (Dollar) ಭಾರತದ ರೂಪಾಯಿ (Indian Rupee) ಪ್ರತಿಸ್ಪರ್ಧೆಯೊಡ್ಡುವ ಪ್ರಯತ್ನ ಆರಂಭಿಸಿದೆ. ಹಲವು ದೇಶಗಳ ಜೊತೆಗೆ ಮಾತುಕತೆ ನಡೆಸುತ್ತಿರುವ ಭಾರತ ಸರ್ಕಾರ ಎರಡು ದೇಶಗಳ ನಡುವೆ ನಡೆಯುವ ವ್ಯಾಪಾರ ವಹಿವಾಟುಗಳನ್ನು ರೂಪಾಯಿಯಲ್ಲೇ ನಡೆಸಲು ಪ್ರೋತ್ಸಾಹಿಸುತ್ತಿದೆ.
ಸರ್ಕಾರದ ಈ ಹೊಸ ಪ್ರಯತ್ನದ ಭಾಗವಾಗಿ ಶ್ರೀಲಂಕಾ (Sri Lanka) ಸರ್ಕಾರವು ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಅನುಮೋದಿಸಿದೆ. ಇನ್ಮುಂದೆ ಭಾರತ ಮತ್ತು ಶ್ರೀಲಂಕಾ ನಡುವೆ ಭಾರತೀಯ ಕರೆನ್ಸಿಯಲ್ಲಿ ವ್ಯಾಪಾರ ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಭಾರತೀಯ ನಾಗರಿಕರು ಶ್ರೀಲಂಕಾದಲ್ಲಿ ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಭಾರತೀಯ ಕರೆನ್ಸಿಯನ್ನು ಬಳಸಲು ಸಾಧ್ಯವಾಗುತ್ತದೆ.
Advertisement
Advertisement
ಇನ್ನು ಹಲವು ದೇಶಗಳು ಭಾರತೀಯ ರೂಪಾಯಿಯಲ್ಲಿ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ಮನ್ನಣೆ ನೀಡಲು ಆಸಕ್ತಿ ತೋರಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಕಾರ, ವಿಶ್ವದ 64 ದೇಶಗಳು ರೂಪಾಯಿಯಲ್ಲಿ ವ್ಯಾಪಾರ ಮಾಡಲು ಭಾರತದೊಂದಿಗೆ ಮಾತುಕತೆ ನಡೆಸುತ್ತಿವೆ. ಇದರಲ್ಲಿ ಜರ್ಮನಿ, ಇಸ್ರೇಲ್‌ನಂತಹ ದೊಡ್ಡ ದೇಶಗಳೂ ಸೇರಿವೆ. ಮೊದಲ ಬಾರಿಗೆ ಯುರೋಪಿಯನ್ ಒಕ್ಕೂಟದಲ್ಲಿರುವ ಜರ್ಮನಿಯು ಏಷ್ಯಾದ ಯಾವುದೇ ಕರೆನ್ಸಿಯೊಂದಿಗೆ ವ್ಯಾಪಾರ ಮಾಡಲು ಮುಂದೆ ಬಂದಿದೆ. ಇದು ಭಾರತಕ್ಕೆ ಆದ್ಯತೆಯನ್ನೂ ನೀಡಿದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್ ಕರೆನ್ಸಿ ಆಗುತ್ತಾ?
Advertisement
30 ದೇಶಗಳೊಂದಿಗೆ ಭಾರತದ ವ್ಯವಹಾರವು ರೂಪಾಯಿಯಲ್ಲಿ ಪ್ರಾರಂಭವಾದರೆ ರೂಪಾಯಿ ಅಂತಾರಾಷ್ಟ್ರೀಯ ಕರೆನ್ಸಿಯಾಗುತ್ತದೆ. ರಷ್ಯಾ ಮತ್ತು ಶ್ರೀಲಂಕಾ ಜೊತೆಗೆ ಇತರ 4 ಆಫ್ರಿಕನ್ ದೇಶಗಳು ಇದಕ್ಕೆ ಅನುಮೋದನೆ ನೀಡಿವೆ. ಇದಲ್ಲದೇ 17 ದೇಶಗಳಲ್ಲಿ ಭಾರತದ ಬ್ಯಾಂಕ್‌ಗಳು ವೋಸ್ಟ್ರೋ ಖಾತೆಗಳನ್ನು ತೆರೆದಿದೆ. ಇತರ ದೇಶಗಳೊಂದಿಗೆ ರೂಪಾಯಿಗಳಲ್ಲಿ ವ್ಯಾಪಾರ ಮಾಡಲು ಇದು ಕಡ್ಡಾಯವಾಗಿದೆ.
Advertisement
ಈ 17 ದೇಶಗಳಲ್ಲಿ 12 ಭಾರತೀಯ ಬ್ಯಾಂಕ್‌ಗಳಿಗೆ ಅನುಮೋದನೆ ನೀಡಲಾಗಿದೆ. ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುಕೊ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಸೇರಿವೆ. ಭಾರತೀಯ ಖರೀದಿದಾರರು ವಿದೇಶಿ ವ್ಯಾಪಾರಿಯೊಂದಿಗೆ ರೂಪಾಯಿಗಳಲ್ಲಿ ವಹಿವಾಟು ನಡೆಸಲು ಬಯಸಿದರೆ, ಸಂಪೂರ್ಣ ಮೊತ್ತವನ್ನು ವೋಸ್ಟ್ರೋ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಭಾರತೀಯ ರಫ್ತುದಾರರು ಸರಬರಾಜು ಮಾಡಿದ ಸರಕುಗಳಿಗೆ ಪಾವತಿ ಮಾಡಬೇಕಾದಾಗ, ಈ ವೋಸ್ಟ್ರೋ ಖಾತೆಯಿಂದ ಕಡಿತಗೊಳಿಸಲಾಗುತ್ತದೆ ಮತ್ತು ಹಣವನ್ನು ರಫ್ತುದಾರರ ಖಾತೆಗೆ ಜಮಾ ಮಾಡಲಾಗುತ್ತದೆ.
ಭಾರತ ಮತ್ತು ಭಾರತೀಯರಿಗೆ ಏನು ಪ್ರಯೋಜನ?
ಆರ್ಥಿಕ ತಜ್ಞ ಪ್ರೊ. ಪ್ರಹ್ಲಾದ್ ಪ್ರಕಾರ, ಇಲ್ಲಿಯವರೆಗೆ ಇತರ ದೇಶಗಳೊಂದಿಗೆ ವ್ಯಾಪಾರ ಮಾಡುವಾಗ ಡಾಲರ್‌ಗಳನ್ನು ಖರ್ಚು ಮಾಡಬೇಕಾಗಿತ್ತು. ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್‌ಗಳ ಕೊರತೆಯೂ ಇದ್ದು, ಇದರಿಂದ ದೇಶದ ಆರ್ಥಿಕ ಬೆಳವಣಿಗೆ ದರದಲ್ಲಿ ಕುಸಿತ ಉಂಟಾಗಿ ಸಾಲವೂ ಹೆಚ್ಚುತ್ತಿದೆ. ಆದರೆ ಇತರ ದೇಶಗಳಿಂದ ರೂಪಾಯಿ ವಹಿವಾಟುಗಳು ಭಾರತೀಯ ವ್ಯಾಪಾರಕ್ಕೆ ಕಡಿಮೆ ಅಪಾಯವನ್ನುಂಟುಮಾಡುತ್ತವೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
ಕಚ್ಚಾ ತೈಲ ಸೇರಿದಂತೆ ಯಾವುದೇ ಉತ್ಪನ್ನವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡರೂ ಅದನ್ನು ರೂಪಾಯಿ ಮೂಲಕ ಪಾವತಿಸಲಾಗುತ್ತದೆ. ಇದರಿಂದ ಪ್ರತಿ ವರ್ಷ ಶತಕೋಟಿ ಡಾಲರ್ ಉಳಿತಾಯವಾಗಲಿದೆ. ಕರೆನ್ಸಿ ಚಂಚಲತೆಯಿಂದ ರಕ್ಷಣೆ ಸಿಗುತ್ತದೆ. ಇದು ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಾಪಾರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತದೆ. ಅಷ್ಟೇ ಅಲ್ಲ, ಡಾಲರ್ ಸೇರಿದಂತೆ ವಿದೇಶಿ ವಿನಿಮಯ ಮೀಸಲು ಇಡುವ ಅಗತ್ಯವೂ ಕಡಿಮೆಯಾಗುತ್ತದೆ. ವಿದೇಶಿ ಕರೆನ್ಸಿ ವಿಶೇಷವಾಗಿ ಡಾಲರ್ ಮೇಲಿನ ಅವಲಂಬನೆ ಕಡಿಮೆಯಾಗುವುದರಿಂದ ಬಾಹ್ಯ ಪ್ರಭಾವಗಳಿಂದ ಭಾರತಕ್ಕೆ ರಕ್ಷಣೆ ಸಿಗಲಿದೆ.
ಅಂತಾರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಯಿಂದ ಜನಸಾಮಾನ್ಯರಿಗೂ ಹಲವು ಅನುಕೂಲಗಳು ಸಿಗಲಿವೆ. ಇದರಲ್ಲಿ ದೊಡ್ಡ ಲಾಭ ಹಣದುಬ್ಬರದಿಂದ ಆಗಲಿದೆ. ಅನೇಕ ಉತ್ಪನ್ನಗಳು ಅಗ್ಗವಾಗಬಹುದು. ಅಡುಗೆ ಎಣ್ಣೆ, ಡ್ರೈಫ್ರೂಟ್ಸ್, ಅನಿಲ, ಕಲ್ಲಿದ್ದಲು, ಔಷಧಗಳು ಸೇರಿದಂತೆ ಹಲವು ವಸ್ತುಗಳು ಭಾರತ ಮತ್ತು ಇತರ ದೇಶಗಳ ನಡುವೆ ವ್ಯಾಪಾರವಾಗುತ್ತವೆ. ರೂಪಾಯಿಗಳಲ್ಲಿ ವ್ಯಾಪಾರ ಮಾಡುವುದರಿಂದ ವಿನಿಮಯ ದರದ ಅಪಾಯವಿರುವುದಿಲ್ಲ ಮತ್ತು ವ್ಯಾಪಾರಸ್ಥರು ಉತ್ತಮ ಚೌಕಾಶಿ ಮಾಡುವ ಮೂಲಕ ಅಗ್ಗವಾಗಿ ವ್ಯವಹಾರಗಳನ್ನು ಅಂತಿಮಗೊಳಿಸಬಹುದು. ಇದರಿಂದ ಆ ಸರಕುಗಳು ಜನಸಾಮಾನ್ಯರಿಗೆ ಅಗ್ಗವಾಗಿ ತಲುಪುತ್ತವೆ.
ಭಾರತೀಯ ಕರೆನ್ಸಿಯ ಪ್ರಚಾರ ಯಾಕೆ?
ಸದ್ಯ ಯುಎಸ್ ಡಾಲರ್ ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯಾಗಿದೆ. ಒಟ್ಟು ಜಾಗತಿಕ ವ್ಯಾಪಾರದಲ್ಲಿ ಇದರ ಪಾಲು 80% ಸಮೀಪದಲ್ಲಿದೆ. ಅಂದರೆ ವಿಶ್ವದ ವ್ಯವಹಾರದಲ್ಲಿ 80% ಕ್ಕಿಂತ ಹೆಚ್ಚು ವಹಿವಾಟುಗಳು ಡಾಲರ್‌ಗಳಲ್ಲಿ ನಡೆಯುತ್ತವೆ. ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳು ವಿದೇಶಿ ಆಮದು-ರಫ್ತಿಗೆ ಡಾಲರ್ ಮೇಲೆ ಅವಲಂಬಿತವಾಗಿವೆ. ಬೇರೆ ದೇಶದಿಂದ ಏನನ್ನಾದರೂ ಖರೀದಿಸಬೇಕಾದರೆ ಅಥವಾ ಮಾರಾಟ ಮಾಡಬೇಕಾದರೆ ಡಾಲರ್‌ಗಳಲ್ಲಿ ವಹಿವಾಟು ನಡೆಸಿ ಪಾವತಿಸಬೇಕಿದೆ. ಅದಕ್ಕಾಗಿಯೇ ಇದನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿ ಎಂದು ಪರಿಗಣಿಸಲಾಗಿದೆ.
ಬಹಳಷ್ಟು ದೇಶಗಳು ತಮ್ಮ ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್ ಕೊರತೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆ ಭಾರತದೊಂದಿಗೆ ವಹಿವಾಟು ನಡೆಸುವ ದೇಶಗಳಿಗೆ ರೂಪಾಯಿಯಲ್ಲಿ ವ್ಯಪಾರ ಮಾಡಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇದು ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಬಲಪಡಿಸುತ್ತದೆ. ಇದನ್ನೂ ಓದಿ: ಉತ್ತರದಲ್ಲಿ ಅವಾಂತರದ ಬಳಿಕ ಮುಂಗಾರು ದಕ್ಷಿಣ ಭಾರತಕ್ಕೆ – ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ರೆಡ್ ಅಲರ್ಟ್
Web Stories