ಖಾಸಗಿ ವಾಹನ ಚಾಲಕರ ಒಕ್ಕೂಟ ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಚಿತ್ರೋದ್ಯಮದ ಕಡೆದಿಂದ ನಿಲುವು ತಟಸ್ಥವಾಗಿದೆ. ಇದೀಗ ಬೆಂಗಳೂರು ಬಂದ್ ಕರೆ ಬೆಂಬಲದ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ (Ba Ma Harish) ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಸಮರ ಸಾರಲು (ಸೆ.11) ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್‌ಗೆ(Bengaluru Bandh) ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ನಿಲುವೇನು ಎಂದು ಭಾ.ಮಾ ಹರೀಶ್ ಮಾತನಾಡಿದ್ದಾರೆ. ಎಂದಿನಂತೆ ಸಿನಿಮಾದ ಎಲ್ಲಾ ಚಟುವಟಿಕೆಗಳು ನಡೆಯುತ್ತದೆ. ಎಂದಿನಂತೆ ಚಿತ್ರ ಪ್ರದರ್ಶನ- ಚಿತ್ರೀಕರಣ ಇರುತ್ತದೆ. ಇದನ್ನೂ ಓದಿ:ಸಮುದ್ರ ತೀರದಲ್ಲಿ ಯಶ್ ಫ್ಯಾಮಿಲಿ- ಪುತ್ರಿ ಜೊತೆ ರಾಧಿಕಾ ತುಂಟಾಟ
ಸಾರ್ವಜನಿಕರಿಗೆ ಅನುಕೂಲವಾಗುವಂತಿದ್ದರೆ, ಬೆಂಬಲ ಕೊಡುವುದು ಸೂಕ್ತ. ಆದರೆ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾದ್ರೆ ತಟಸ್ಥವಾಗಿರುವುದೇ ಒಳಿತು ಎಂದು ಭಾ.ಮಾ ಹರೀಶ್ ಮಾತನಾಡಿದ್ದಾರೆ. ಸಿನಿಮೋದ್ಯಮದ ನಿಲುವು ಸದಾ ಸಾರ್ವಜನಿಕ ಪರ ಇರುತ್ತದೆ ಎಂದು ಬೆಂಗಳೂರು ಬಂದ್ ಕುರಿತು ಮಾತನಾಡಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]