ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬದ ವಿರುದ್ಧದ ಮುಡಾ ನಿವೇಶನ (Muda Case) ಹಂಚಿಕೆ ಹಗರಣ ಸಂಬಂಧ ಲೋಕಾಯುಕ್ತ ‘ಬಿ’ ರಿಪೋರ್ಟ್ (B Report) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ ಆದೇಶ ಕಾಯ್ದಿರಿಸಿದೆ.
ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಬಿ ರಿಪೋರ್ಟ್ ಒಪ್ಪಬೇಕಾ? ಅಥವಾ ಮರುತನಿಖೆಗೆ ಆದೇಶಿಸಬೇಕಾ? ಅನ್ನೋ ಬಗ್ಗೆ ನಾಳೆ ಗೊತ್ತಾಗಲಿದೆ. ಇದನ್ನೂ ಓದಿ: ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ
ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಪ್ರೊಟೆಸ್ಟ್ ಅರ್ಜಿ ಹಾಕಿದ್ದರು. ಈ ಹಿಂದೆ ತನಿಖೆ ಪೂರ್ಣವಾದ ಬಳಿಕ ‘ಬಿ’ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡೋದಾಗಿ ಕೋರ್ಟ್ ಹೇಳಿತ್ತು. ಕಳೆದ 6 ತಿಂಗಳಿಂದ ತನಿಖೆಯಲ್ಲಿ ಪ್ರಗತಿ ಆಗದ ಹಿನ್ನೆಲೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ‘ಬಿ’ ರಿಪೋರ್ಟ್ ಬಗ್ಗೆ ಆದೇಶ ಮಾಡಲು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದರು. ಇಂದು ಕೋರ್ಟ್ ಕಲಾಪದ ಅವಧಿ ಮುಕ್ತಾಯ ಹಿನ್ನೆಲೆ ಆದೇಶ ನಾಳೆಗೆ ಮುಂದೂಡಿಕೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ ಕ್ಲೈಮ್ಯಾಕ್ಸ್ ಹಂತಕ್ಕೆ – ಅಂತಿಮ ವರದಿ ಸಲ್ಲಿಸಲು SIT ತಯಾರಿ