ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಯಾರಾಗ್ತಾರೆ ಅಡ್ವೊಕೇಟ್ ಜನರಲ್ ಅನ್ನೋ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ. ಪ್ರಮುಖವಾಗಿ ನಾಲ್ವರ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್, ಸುಪ್ರೀಂ ಕೋರ್ಟ್ (Supreme Court) ವಕೀಲ ಸಂಕೇತ್ ಏಣಗಿ, ಮಧುಸೂಧನ್ ನಾಯಕ್ ಹಾಗೂ ಕಾಂತರಾಜು ಹೆಸರುಗಳು ಚಾಲ್ತಿಯಲ್ಲಿವೆ.
Advertisement
ಕಾಂಗ್ರೆಸ್ (Congress) ಪಕ್ಷವನ್ನ ನ್ಯಾಯಾಲಯಗಳಲ್ಲಿ ಬಲವಾಗಿ ಸಮರ್ಥಿಸಿಕೊಂಡು ಹಲವಾರು ಗೆಲುವುಗಳನ್ನ ತಂದುಕೊಟ್ಟ ಕೀರ್ತಿ ಸಂಕೇತ್ ಏಣಗಿಯವರಿಗೆ ಸಲ್ಲುತ್ತೆ. ಸಂಕೇತ್ ಏಣಗಿಯವರು ಪ್ರಬಲ ಲಿಂಗಾಯತ ಜಾತಿಗೆ ಸೇರಿದವರಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಲಿಂಗಾಯತ (Lingayat) ಅಸ್ತ್ರ ಬಳಸಿ ಇವರ ಕಾನೂನು ಹೋರಾಟವನ್ನ ತಪ್ಪಿಸಿ, ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿದರಾದರೂ, ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ತೊರೆಯದೆ ಕೋರ್ಟ್ ಗಳಲ್ಲಿ ಸಮರ್ಥ ವಾದ ಮಂಡಿಸಿ, ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ರು. ಇದನ್ನೂ ಓದಿ: Exclusive- ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಹೇಗೆ?
Advertisement
1
ಬಿಜೆಪಿಯ ಸಾಕಷ್ಟು ಪ್ರಬಲ ವಿರೋಧದ ನಡುವೆಯೂ, ಈವರೆಗೂ ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಂವಿಧಾನದ ಆಶಯ ಮತ್ತು ತತ್ವವನ್ನೂ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಅದರ ತತ್ವ ಸಿದ್ಧಾಂತಗಳನ್ನು ಎಲ್ಲ ನ್ಯಾಯಾಲಯ
ಹಾಗೂ ಜನತಾ ನ್ಯಾಯಾಲಯದಲ್ಲಿ ಎಲ್ಲ ಹಂತದಲ್ಲೂ ಶಕ್ತಿಮೀರಿ ಸಮರ್ಥ ಹಾಗೂ ಸಮರ್ಪಕವಾಗಿ ರಕ್ಷಿಸಿದ್ದೇನೆ.
— Sanket Yenagi (@Sanket_Yenagi) May 19, 2023
Advertisement
ಲಿಂಗಾಯತ ಕಮ್ಯುನಿಟಿಗೆ ಸಿಎಂ, ಡಿಸಿಎಂ ಪೋಸ್ಟ್ ಸಿಗದ ಹಿನ್ನೆಲೆಯಲ್ಲಿ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ವೋಟ್ ಹಾಕಿಸಿಕೊಳ್ಳಲು ಲಿಂಗಾಯತ ಕಮ್ಯುನಿಟಿ ಬೇಕು, ಹುದ್ದೆಗೆ ಮಾತ್ರ ಯಾಕಿಲ್ಲ ಅಂತಾ ಸರ್ಕಾರವನ್ನ ಟೀಕಿಸ್ತಿದ್ದಾರೆ. ಹೀಗಾಗಿ ಈ ಬಾರಿ ಅಡ್ವೊಕೇಟ್ ಜನರಲ್ ಹುದ್ದೆ ಸಂಕೇತ್ ಏಣಗಿ (Sanket Yenagi) ಯವರಿಗೆ ಕೊಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗ್ತಿದೆ. ತಾನೂ ಪ್ರಬಲ ಆಕಾಂಕ್ಷಿ ಅಂತಾ ಟ್ವೀಟ್ ಮೂಲಕ ಸಿಎಂ ಹಾಗೂ ಡಿಸಿಎಂಗೆ ಒತ್ತಾಯಿಸುವ ಕೆಲಸ ಮಾಡಿದ್ದಾರೆ ಸಂಕೇತ್ ಏಣಗಿ.
Advertisement
ಬಿಜೆಪಿಯ ಸಾಕಷ್ಟು ಪ್ರಬಲ ವಿರೋಧದ ನಡುವೆಯೂ, ಈವರೆಗೂ ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಂವಿಧಾನದ ಆಶಯ ಮತ್ತು ತತ್ವವನ್ನೂ ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಅದರ ತತ್ವ ಸಿದ್ಧಾಂತಗಳನ್ನು ಎಲ್ಲ ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದಲ್ಲಿ ಎಲ್ಲ ಹಂತದಲ್ಲೂ ಶಕ್ತಿಮೀರಿ ಸಮರ್ಥ ಹಾಗೂ ಸಮರ್ಪಕವಾಗಿ ರಕ್ಷಿಸಿದ್ದೇನೆ. ಇದಕ್ಕಾಗಿ ಬಿಜೆಪಿಯಿಂದ ಸಾಕಷ್ಟು ವೈಯಕ್ತಿಕ ಹಾಗೂ ವೃತ್ತಿಪರ ಹಾನಿ, ತೊಂದರೆ, ಕೀಳಮಟ್ಟದ ಟೀಕೆ, ಮಾನಸಿಕ ಹಾಗೂ ಚಿತ್ರಹಿಂಸೆ ಅನುಭವಿಸಿದ್ದರೂ, ಎಂದೂ ಎದೆಗುಂದದೇ ನನ್ನ ಕರ್ತವ್ಯ ನಾನು ಮಾಡಿದ್ದೇನೆ. ನನ್ನ ಕಾಂಗ್ರೆಸ್ ಪಕ್ಷ ನನಗೆ ಎಂದೂ ಅನ್ಯಾಯ ಮಾಡದು ಎಂಬ ಗಾಢ ನಂಬಿಕೆ ನನಗಿದೆ ಎಂದು ಸಂಕೇತ ಏಣಗಿ ತಿಳಿಸಿದ್ದಾರೆ.
ಅಡ್ವೊಕೇಟ್ ಜನರಲ್ ಹುದ್ದೆ ಸಂಕೇತ್ ಏಣಗಿಯವರಿಗೆ ದೊರಕಿದ್ದೇ ಆದಲ್ಲಿ ದೇಶದ ಇತಿಹಾಸದಲ್ಲಿ 43 ವರ್ಷಕ್ಕೆ ಈ ಹುದ್ದೆಗೇರಿದ ಅತಿ ಕಿರಿಯ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ 49 ವರ್ಷಕ್ಕೆ ಸಂತೋಷ್ ಹೆಗ್ಡೆಯವರು ಅಡ್ವೊಕೇಟ್ ಜನರಲ್ ಹುದ್ದೆಗೇರಿದ್ರು.