– ಇರಾನ್ ಮಿಲಿಟರಿ ಸಾಮರ್ಥ್ಯವನ್ನು ಅಮೆರಿಕ 100% ನಾಶಪಡಿಸಿದೆ ಎಂದ ದೊಡ್ಡಣ್ಣ
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿ (Hormuz Strait) ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಶೀಘ್ರದಲ್ಲೇ ಓಪನ್ ಆಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ (Iran) ಮಾಡಿದ ಪ್ರಯತ್ನದಿಂದ ಬಾಧಿತವಾಗಿರುವ ದೇಶಗಳು, ಜಲಮಾರ್ಗವು ಮುಕ್ತ ಮತ್ತು ಸುರಕ್ಷಿತವಾಗಿರಲು ಅಮೆರಿಕದೊಂದಿಗೆ ಯುದ್ಧನೌಕೆಗಳನ್ನು ಕಳುಹಿಸುವ ನಿರೀಕ್ಷೆಯಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಆಯತೊಲ್ಲಾ ಖಮೇನಿ ಭಾರತವನ್ನು ಪ್ರೀತಿಸುತ್ತಿದ್ದರು: ಇರಾನ್ ಸರ್ವೋಚ್ಚ ನಾಯಕನ ರಾಯಭಾರಿ
ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಅಮೆರಿಕ 100% ನಾಶಪಡಿಸಿದೆ. ಆದರೆ ಡ್ರೋನ್‌ಗಳು, ಗಣಿಗಳು ಅಥವಾ ಅಲ್ಪ-ಶ್ರೇಣಿಯ ಕ್ಷಿಪಣಿಗಳೊಂದಿಗೆ ಸಾಗಣೆಯನ್ನು ಅಡ್ಡಿಪಡಿಸಲು ಇರಾನ್ ಇನ್ನೂ ಪ್ರಯತ್ನಿಸಬಹುದು ಎಂದು ಎಚ್ಚರಿಸಿದ್ದಾರೆ. ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುಕೆ ಸೇರಿದಂತೆ ರಾಷ್ಟ್ರಗಳು ಈ ಪ್ರದೇಶಕ್ಕೆ ಪಡೆಗಳನ್ನು ನಿಯೋಜಿಸುವಂತೆ ಒತ್ತಾಯಿಸಿವೆ. ಈ ನಡೆಯು ಜಲಸಂಧಿ ವಿಚಾರದಲ್ಲಿ ಇರಾನ್‌ನ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಕರಾವಳಿಯುದ್ದಕ್ಕೂ ಇರಾನಿನ ನೆಲೆಗಳ ಮೇಲೆ ಅಮೆರಿಕ ದಾಳಿ ಮುಂದುವರಿಸುತ್ತದೆ. ಇರಾನಿನ ಬೋಟ್‌ಗಳು ಮತ್ತು ಹಡಗುಗಳನ್ನು ಟಾರ್ಗೆಟ್ ಮಾಡುತ್ತಿದೆ. ನಾವು ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ಮುಕ್ತಗೊಳಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಯುಎಇಯಲ್ಲಿ ಇರಾನ್ ದಾಳಿ ವೀಡಿಯೋ ಮಾಡಿದ್ರೆ ಅರೆಸ್ಟ್ – ಇಲ್ಲಿವರೆಗೂ 45 ಮಂದಿ ಅಂದರ್
ಇರಾನ್‌ನಿಂದ ಒಳಬರುವ ಕ್ಷಿಪಣಿಗಳು ಪತ್ತೆಯಾಗಿವೆ ಎಂಬ ಇಸ್ರೇಲ್ ಮಿಲಿಟರಿಯ ಎಚ್ಚರಿಕೆಯ ನಂತರ ಶನಿವಾರ ಜೆರುಸಲೆಮ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲಿ ಜಂಟಿ ದಾಳಿಯಿಂದ ಭುಗಿಲೆದ್ದ ಮಧ್ಯಪ್ರಾಚ್ಯ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದೆ.

