ಜೀವಮಾನದಲ್ಲಿ ಒಂದೇ ಒಂದು ಸಾರಿ ಆಸ್ಕರ್ ಪ್ರಶಸ್ತಿ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಕನಸಾಗಿರುತ್ತದೆ. ಸುದೀರ್ಘ ಸಿನಿಮಾ ಪಯಣದಲ್ಲಿ ಹಾಲಿವುಡ್ ಖ್ಯಾತ ನಟ ವಿಲ್ ಸ್ಮಿತ್ ಮೊದಲ ಬಾರಿಗೆ ಈ ಸಲ ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಆದರೆ, ಆ ಸಂಭ್ರಮ ಇದೀಗ ಮಣ್ಣುಪಾಲಾಗಿದೆ. ಇದನ್ನೂ ಓದಿ : ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು
Advertisement
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪತ್ನಿ ಜಾಡಾರ ಬೊಕ್ಕ ತಲೆಯ ಬಗ್ಗೆ ನಟ ಕ್ರಿಸ್ ರಾಕ್ ವೇದಿಕೆಯ ಮೇಲೆ ಲೇವಡಿ ಮಾಡಿದ್ದರು. ಅದೊಂದು ಸಣ್ಣ ಜೋಕ್ ಎನ್ನುವಂತೆ ಕ್ರಿಸ್ ರಾಕ್ ಅಂದುಕೊಂಡಿದ್ದರೆ, ವಿಲ್ ಸ್ಮಿತ್ ಅದನ್ನು ಅವಮಾನದ ರೀತಿಯಲ್ಲಿ ತಗೆದುಕೊಂಡು ವೇದಿಕೆಯ ಮೇಲೆಯೇ ಕ್ರಿಸ್ ಗೆ ಕಪಾಳಮೋಕ್ಷ ಮಾಡಿದ್ದರು. ಈ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ
Advertisement
Advertisement
ತಮಗೆ ಆಸ್ಕರ್ ಪ್ರಶಸ್ತಿ ಬಂದಿರುವುದನ್ನು ಘೋಷಿಸಿದಾಗ ವೇದಿಕೆಯ ಮೇಲೆ ಬಂದ ವಿಲ್ ಸ್ಮಿತ್ ತಾವು ಆ ರೀತಿ ವರ್ತಿಸಬಾರದಿತ್ತು. ದುಡುಕಿನಿಂದ ಆಯಿತು ಎಂದು ಆಸ್ಕರ್ ಅಕಾಡಮಿಗೆ ಕ್ಷಮೆ ಕೇಳಿದ್ದರು. ವೇದಿಕೆಯ ಮೇಲೆ ಕ್ರಿಸ್ ಗೆ ಕ್ಷಮೆ ಕೇಳದೇ ಇದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡು ತಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕ್ರಿಸ್ ಗೆ ಮನವಿ ಮಾಡಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆಸ್ಕರ್ ಆಯೋಜಕ ಸಂಸ್ಥೆ ಅಕಾಡಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ ಅಂಡ್ ಸೈನ್ಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್
Advertisement
‘ಅಂದು ನಾನು ಎಲ್ಲರ ಸಂಭ್ರಮವನ್ನು ಕಿತ್ತುಕೊಂಡಿದ್ದೇನೆ. ಆಸ್ಕರ್ ಇತಿಹಾಸದಲ್ಲೇ ಆಗದೇ ಇರುವಂತಹ ಕೆಟ್ಟ ಘಟನೆ ನನ್ನಿಂದ ನಡೆದು ಹೋಗಿದೆ. ಅದರಿಂದ ತುಂಬಾ ನೊಂದುಕೊಂಡಿದ್ದೇನೆ. ನಾನು ಹಾಗೆ ವರ್ತಿಸಬಾರದಿತ್ತು. ನನ್ನಿಂದ ದೊಡ್ಡ ರೀತಿಯಲ್ಲೇ ಪ್ರಮಾದ ನಡೆದಿದೆ. ಹಾಗಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ. ಅಕಾಡಮಿ ಯಾವುದೇ ಕ್ರಮ ತಗೆದುಕೊಂಡರೂ, ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.