ಉಡುಪಿ: ವಿಜಯನಗರದಲ್ಲಿ (Vijayanagar) ಕುಂಕುಮ ಬೇಡ ಎಂದ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಉಡುಪಿ (Udupi) ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಗಾಗಿ ಸಿಎಂ ಹೀಗೆ ವರ್ತಿಸುತ್ತಾರೆ. ಸಿದ್ದರಾಮಯ್ಯ-ಡಿಕೆ ಸುರೇಶ್ ನಿವೃತ್ತಿ ಜೀವನವನ್ನು ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಕಳೆಯುವ ಯೋಚನೆ ಮಾಡಿರಬಹುದು ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಗ್ಯಾರಂಟಿ ನಿರ್ವಹಿಸಲಾಗದೆ ಕೇಂದ್ರದ ಅನುದಾನ ಬಂದಿಲ್ಲ ಅಂತಿದ್ದಾರೆ ಕಾಂಗ್ರೆಸ್‌ನವ್ರು: ಜೋಶಿ ಆರೋಪ
ಸಿದ್ದರಾಮಯ್ಯ ದೇಶ ವಿರೋಧಿ, ಹಿಂದೂ ವಿರೋಧಿ ನೀತಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಿದ್ದಾರೆ. ಭ್ರಷ್ಟಾಚಾರ ದೇಶ ವಿರೋಧಿ, ಹಿಂದೂ ವಿರೋಧಿ ನಿಲುವನ್ನು ಕಾಂಗ್ರೆಸ್ ತಳೆದಿದೆ. ಕುಂಕುಮ ಕೊಡಲು ಬಂದಾಗ ಅದನ್ನು ಸಿದ್ದರಾಮಯ್ಯ ತಡೆದಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಂಜಾಬ್ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ