ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದ ಕಾಂತಾರ (Kantara) ಸಿನಿಮಾದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಅವರ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಪಾತ್ರವೊಂದನ್ನು ನಿರ್ವಹಿಸಿದ್ದರು. ಅಲ್ಲದೇ, ಕಾಸ್ಟ್ಯೂಮ್ ಡಿಸೈನ್ ಕೂಡ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿ ‘ಕಾಂತಾರ 2’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಪ್ರಗತಿ ನಟಿಸಲಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ ರಿಷಬ್ ಅಭಿಮಾನಿಗಳು.
ಕಾಂತಾರ ಸಿನಿಮಾದಲ್ಲಿ ಪ್ರಗತಿ ರಾಣಿಯ ಪಾತ್ರ ಮಾಡಿದ್ದರು. ಕಾಂತಾರ ಚಿತ್ರ ಶುರುವಾಗುವುದೇ ರಾಜನೊಬ್ಬನ ಕಥೆಯಿಂದ. ಈ ರಾಜನ ಪತ್ನಿಯಾಗಿ ಪ್ರಗತಿ ನಟಿಸಿದ್ದರು. ಜೊತೆಗೆ ರಿಷಬ್ ಅವರ ಪುತ್ರ ಕೂಡ ಇದೇ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ವಿಷಯವನ್ನು ಪ್ರಗತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಅವು ವೈರಲ್ ಕೂಡ ಆಗಿವೆ.
ಕಾಂತಾರ ಸಿನಿಮಾದಲ್ಲಿನ ತಮ್ಮ ಪಾತ್ರದ ಫೋಟೋವನ್ನು ಪ್ರಗತಿ ಹಂಚಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಶುಭ ಕೋರಿದ್ದಾರೆ. ನಮಗೆ ಗೊತ್ತೇ ಆಗಲಿಲ್ಲ ಎಂದೂ ಹಲವರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಈ ಬಾರಿ ಯಾವ ಪಾತ್ರದಲ್ಲಿ ನಿಮ್ಮನ್ನು ನೋಡಬಹುದು ಎಂದೂ ಹಲವರು ಕೇಳಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ
ರಾಜಮನೆತನದ ಕಥೆಯನ್ನು ಹೇಳುವ ಮೂಲಕ ಕಾಂತಾರ ಶುರು ಮಾಡಿದ್ದರು ರಿಷಬ್. ಹಾಗಾಗಿ ಪತ್ನಿಗೆ ಪಾತ್ರ ನೀಡಿದ್ದರು. ಈ ಬಾರಿ ಯಾವ ರೀತಿಯಲ್ಲಿ ಕಥೆ ಶುರು ಮಾಡುತ್ತಾರೆ ಎನ್ನುವುದು ಸಸ್ಪನ್ಸ್. ಹಾಗಾಗಿ ಪತ್ನಿಗೆ ಪಾತ್ರ ಕೊಡುತ್ತಾರಾ? ಅಥವಾ ಬೇರೆ ಜವಾಬ್ದಾರಿಯನ್ನು ನೀಡುತ್ತಾರೆ ಎಂದು ಕಾದು ನೋಡಬೇಕು.