ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯ ಬಳಿಕ ಮತ್ತೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಬರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಎರಡು ತಿಂಗಳಿನಲ್ಲಿ ಮನ್ ಕೀ ಬಾತ್ ನಡೆಯುವುದಿಲ್ಲ. ಮೇ ತಿಂಗಳ ಕೊನೆಯ ವಾರದಲ್ಲಿ ಕಾರ್ಯಕ್ರಮ ಮತ್ತೆ ಪ್ರಸಾರವಾಗಲಿದೆ ಎಂದು ಹೇಳಿ ಮತ್ತೆ ತಾವೇ ಅಧಿಕಾರಕ್ಕೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
The wait for our own National War Memorial is over!
Tomorrow, India will get its own War Memorial, which will honour those who protect us with utmost valour.
I am sure visiting the war memorial will be no less than a pilgrimage! #MannKiBaat pic.twitter.com/zhsYERdpRD
— Narendra Modi (@narendramodi) February 24, 2019
Advertisement
52ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ತಿಳಿಸಿದರು. ಅಲ್ಲದೇ ಈ ಕಾರ್ಯಕ್ರಮ ಅದ್ಭುತ ಹಾಗೂ ಉತ್ಕøಷ್ಟ ಅನುಭವ ನೀಡಿದೆ ಎಂದು ಹೇಳಿರುವ ಪ್ರಧಾನಿ ಮೋದಿ ಅವರು, ಕಾರ್ಯಕ್ರಮದಲ್ಲಿ ಯೋಧರ ಸ್ಮಾರಕ ನಿರ್ಮಾಣ, ಪುಲ್ವಾಮಾ ದಾಳಿ, ಮೊರಾರ್ಜಿ ದೇಸಾಯಿ ಅವರನ್ನ ನೆನೆದರು.
Advertisement
ಸ್ವಾತಂತ್ರ್ಯ ನಂತರ ಇಷ್ಟು ವರ್ಷಗಳವರೆಗೂ ಯುದ್ಧ ಸ್ಮಾರಕ್ಕಾಗಿ ನಾವೆಲ್ಲ ಕಾಯುತ್ತಿದ್ದೆವು. ನಾಳೆ ಕೋಟ್ಯಂತರ ದೇಶವಾಸಿಗಳ ರಾಷ್ಟ್ರೀಯ ಯುದ್ಧ ಸ್ಮಾರಕದ ಕನಸು ನನಸಾಗುತ್ತಿದೆ. 125 ಕೋಟಿ ದೇಶ ವಾಸಿಗಳ ರಕ್ಷಣೆಗೆ ಯೋಧರು ನಿಂತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ ಜಾತಿ, ಕೋಮು, ಪ್ರಾದೇಶಿಕ ಬೇಧ ಮರೆತು ದೇಶಕ್ಕಾಗಿ ಒಂದಾಗಬೇಕಿದೆ ಕರೆ ನೀಡಿದರು.
Advertisement
ಮುಂದಿನ ತಿಂಗಳು ಜೆಮ್‍ಶೆಡ್ ಜಿ ಟಾಟಾ ಅವರ ಹುಟ್ಟು ಹಬ್ಬ ಇರುವುದರಿಂದ ಅವರ ಹೆಸರನ್ನು ಪ್ರಸ್ತಾಪಿಸಿ ದೇಶಕ್ಕೆ ಒಳ್ಳೆಯ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು. ಇದೇ ವೇಳೆ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಅವರ ಕೊಡುಗೆ ಅಪಾರ. ಪ್ರಜಾಪ್ರಭುತ್ವದಲ್ಲಿ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯಲ್ಲಿ ಚಳುವಳಿ ನಡೆಸಿದ್ದರು ಎಂದು ಸ್ಮರಿಸಿದರು.
ಮುಂದಿನ ಕೆಲವು ದಿನಗಳಲ್ಲಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭಕೋರಿದರು. ತಮ್ಮ ಆಡಳಿತ ಅವಧಿಯಲ್ಲಿ ಜಾರಿ ಮಾಡಲಾದ ಹಲವು ಯೋಜನೆಗಳನ್ನು ಪ್ರಸ್ತಾಪ ಮಾಡಿ ದೇಶದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕಾರ್ಯನಿರ್ವಹಿಸಿದೆ ಎಂದರು.
The 44th Amendment made our democracy stronger and ensured authoritarian tendencies can't subvert our Constitution, like what was done during the Emergency.
During #MannKiBaat today, we paid tributes to Morarjibhai Desai and his role in protecting our democratic fabric. pic.twitter.com/H2YHMlMBXJ
— Narendra Modi (@narendramodi) February 24, 2019
Discussing several subjects during #MannKiBaat. Tune in. https://t.co/rgaogMogjP
— Narendra Modi (@narendramodi) February 24, 2019