– ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಮಧ್ಯಪ್ರಾಚ್ಯದತ್ತ ಅಮೆರಿಕ ಯುದ್ಧ ವಿಮಾನಗಳು
ಟೆಹ್ರಾನ್/ವಾಷಿಗ್ಟನ್: ಇರಾನ್ (Iran) ಮೇಲಿನ ಯಾವುದೇ ದಾಳಿಯನ್ನು ಪೂರ್ಣ ಪ್ರಮಾಣದ ಯುದ್ಧವಾಗಿ ಪರಿಗಣಿಸುತ್ತೇವೆ. ಜೊತೆಗೆ ಸಾಧ್ಯವಾದಷ್ಟು ಕಠಿಣ ರೀತಿಯಲ್ಲೇ ಪ್ರತಿಕ್ರಿಯೆ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಇರಾನ್ ಎಚ್ಚರಿಕೆ ನೀಡಿದೆ.
ಪೂರ್ಣ ಮಿಲಿಟರಿ ಬಲ ಪ್ರಯೋಗ
ಅಮೆರಿಕ ಸೇನೆಯು ತನ್ನ ಯುದ್ಧ ನೌಕೆಗಳ (US Warships) ದೊಡ್ಡ ಪಡೆಯನ್ನೇ ಪಶ್ಚಿಮ ಏಷ್ಯಾ ಕಡೆಗೆ ಕಳುಹಿಸುತ್ತಿದೆ. ಪ್ರತಿಭಟನಕಾರರನ್ನ (Protester) ಹತ್ಯೆ ಮಾಡಿದರೆ ಇರಾನ್ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ಹೇಳಿಕೆ ಬೆನ್ನಲ್ಲೇ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲ್ ಖಮೇನಿ ಎಚ್ಚರಿಕೆ ನೀಡಿದೆ. ಅಲ್ಲದೇ ಅಮೆರಿಕವನ್ನ ಹಿಮ್ಮೆಟ್ಟಿಸಲು ತನ್ನಲ್ಲಿರುವ ಎಲ್ಲಾ ಮಿಲಿಟರಿ (Iran Military) ಸಾಮರ್ಥ್ಯ ಪ್ರಯೋಗಿಸುವುದಾಗಿ ಹೇಳಿದೆ.

ಈ ಬಾರಿ ನಮ್ಮ ದೇಶದ ಮೇಲೆ ನಡೆಸುವ ಯಾವುದೇ ದಾಳಿಯನ್ನ ಸಂಪೂರ್ಣ ಯುದ್ಧವೆಂದು ಪರಿಗಣಿಸುತ್ತೇವೆ. ಇದಕ್ಕೆ ಪ್ರತ್ಯುತ್ತರವಾಗಿ ಕಠಿಣ ರೀತಿಯಲ್ಲಿ ಪ್ರಯೋಗಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟ್ರಂಪ್ ಬೆದರಿಕೆ ಏನು?
ಅಮೆರಿಕ ಸೇನೆಯು ತನ್ನ ಯುದ್ಧ ನೌಕೆಗಳನ್ನ ಪಶ್ಚಿಮ ಏಷ್ಯಾ ಕಡೆಗೆ ಕಳುಹಿಸುತ್ತಿದೆ. ಪ್ರತಿಭಟನಕಾರರನ್ನ ಹತ್ಯೆ ಮಾಡಿದರೆ ಇರಾನ್ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು.

ಈ ಬೆನ್ನಲ್ಲೇ ಯುದ್ದ ವಿಮಾನವಾಹನ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ನೇತೃತ್ವದಲ್ಲಿ ಯುದ್ಧ ನೌಕೆಗಳ ತಂಡವು ದಕ್ಷಿಣ ಚೀನಾ ಸಮುದ್ರದಿಂದ ಪ್ರಯಾಣ ಬೆಳೆಸಿದೆ. ಈ ಯುದ್ಧ ನೌಕೆಗಳ ತಂಡವು ಇದೀಗ ಹಿಂದೂ ಮಹಾಸಾಗರದಲ್ಲಿದೆ’ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕಾಗಿ ಬಂದರೆ, ಸಜ್ಜಾಗುವ ನಿಟ್ಟಿನಲ್ಲಿ ಯುದ್ಧ ನೌಕೆಗಳನ್ನು ಕಳುಹಿಸುತ್ತಿದ್ದೇವೆ. ಆದರೆ ಅವುಗಳನ್ನು ಬಳಸುವ ಅನಿವಾರ್ಯತೆ ಎದುರಾಗದು ಎಂದು ಟ್ರಂಪ್ ಗುರುವಾರ ಹೇಳಿದ್ದರು.
ಇದೀಗ ಇರಾನ್‌ನ ತೀಕ್ಷ್ಣ ಪ್ರತಿಕ್ರಿಯೆ ಇರಾನ್ ಮೇಲೆ ಅಮೆರಿಕ ಯುದ್ಧ ಮಾಡುವ ಸಾಧ್ಯತೆ ದಟ್ಟವಾಗಿದ್ದಂತೆ ತೋರುತ್ತಿದೆ.

