ಮೈಸೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸುಳಿವು ನೀಡಿದ್ದಾರೆ.
ಇಷ್ಟು ದಿನ ತಮ್ಮ ಕುಟುಂಬದಿಂದ ತಾವು ಮತ್ತು ರೇವಣ್ಣ ಇಬ್ಬರೇ ಚುನಾವಣೆಗೆ ಸ್ಪರ್ಧಿಸುತ್ತೇವೆ ಅಂತಾ ಕಡ್ಡಿತುಂಡಾಗುವ ರೀತಿ ಮಾತಾಡುತ್ತಿದ್ದ ಎಚ್.ಡಿ. ಕುಮಾರಸ್ವಾಮಿ ಇವತ್ತು ಮೈಸೂರಿನಲ್ಲಿ ಮಾತ್ರ ಈ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿ ಪ್ರಜ್ವಾಲ್ ರೇವಣ್ಣ ಸ್ಪರ್ಧೆ ಮಾಡಿದರೂ ಅಚ್ಚರಿ ಇಲ್ಲ ಅನ್ನೋ ಭಾವನೆ ಮೂಡಿಸಿದ್ದಾರೆ.
Advertisement
Advertisement
ಪ್ರಜ್ವಲ್ ರೇವಣ್ಣ ಟಿಕೆಟ್ ಬೇಕು ಅಂತ ಅಪೇಕ್ಷೆ ಪಡುವಲ್ಲಿ ತಪ್ಪೇನಿಲ್ಲ. ರಾಜರಾಜೇಶ್ವರಿ ನಗರದಲ್ಲಿ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ಹಾಗಾಗಿ ಅವರು ಟಿಕೆಟ್ ಕೇಳುತ್ತಿದ್ದಾರೆ. ಆ ಬಗ್ಗೆ ಪಕ್ಷದ ಒಳಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
Advertisement
Advertisement
ಪಕ್ಷದಲ್ಲಿ ಯಾರು ಬೇಕಾದರೂ ಟಿಕೆಟ್ ಕೇಳಬಹುದು. ಅವರಿಗೆ ಗೆಲ್ಲುವ ಸಾಮರ್ಥ್ಯವಿದ್ದರೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರಜ್ವಲ್ ಟಿಕೆಟ್ ವಿಚಾರದಲ್ಲಿ ಕಾಲ ನಿರ್ಧಾರ ಮಾಡಲಿದೆ ಎಂದು ಹೇಳುವ ಮೂಲಕ ಪ್ರಜ್ವಲ್ ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ಸುಳಿವು ಬಿಟ್ಟುಕೊಟ್ಟರು.